alex Certify
ಕನ್ನಡ ದುನಿಯಾ       Mobile App
       

Kannada Duniya

ಕೋರ್ಟ್ ಮುಂದೆ ಪ್ಯಾಂಟ್ ಬಿಚ್ಚಿ ಖಾಸಗಿ ಅಂಗ ತೋರಿಸಿದ ಆರೋಪಿ

ಕನೆಕ್ಟಿಕಟ್ ನಲ್ಲಿ ಅತ್ಯಾಚಾರಿ ಆರೋಪಿಯೊಬ್ಬನನ್ನು ಕೋರ್ಟ್ ನಿರ್ದೋಷಿಯೆಂದು ತೀರ್ಪು ನೀಡಿದೆ. ಆದ್ರೆ ತಾನು ನಿರ್ದೋಷಿ ಎಂಬುದನ್ನು ಸಾಬೀತುಪಡಿಸಲು ಆರೋಪಿ ಮಾಡಿದ ಕೆಲಸ ಮಾತ್ರ ಆಶ್ಚರ್ಯಹುಟ್ಟಿಸಿತ್ತು. ಕೋರ್ಟ್ ನಲ್ಲಿಯೇ ಪ್ಯಾಂಟ್ ಬಿಚ್ಚಿದ ಆರೋಪಿ ಜ್ಯೂರಿ ಸದಸ್ಯರಿಗೆ ಖಾಸಗಿ ಅಂಗವನ್ನು ತೋರಿಸಿದ್ದಾನೆ.

2012ರಲ್ಲಿ ಮಹಿಳೆಯೊಬ್ಬಳು ಆರೋಪಿ ವಿರುದ್ಧ ಅತ್ಯಾಚಾರದ ದೂರು ನೀಡಿದ್ದಳು. ವ್ಯಕ್ತಿ ಕಪ್ಪು ಬಣ್ಣದವನಾಗಿದ್ದು ದೇಹದ ಉಳಿದ ಭಾಗಕ್ಕಿಂತ ಆತನ ಖಾಸಗಿ ಅಂಗ ಹಗುರವಾಗಿತ್ತು ಎಂದು ದೂರಿದ್ದಳು. 2014ರಲ್ಲಿ ಆರೋಪಿ ಹೆಸರನ್ನು ಮಹಿಳೆ ಹೇಳಿದ್ದಳು. ಡೆಸ್ಮೆಂಟ್ಸ್ ಜೇಮ್ಸ್ ಅತ್ಯಾಚಾರವೆಸಗಿದ್ದಾನೆಂದು ಮಹಿಳೆ ಹೇಳಿದ್ದಳು. ಆತನ ಖಾಸಗಿ ಅಂಗ ಹಾಗೂ ಮಹಿಳೆ ಹೇಳಿದ ಖಾಸಗಿ ಅಂಗಕ್ಕೆ ಹೊಂದಾಣಿಕೆಯಾಗ್ತಿರಲಿಲ್ಲ.

ಖಾಸಗಿ ಅಂಗದ ಫೋಟೋ ತೆಗೆದು ಕೋರ್ಟ್ ಗೆ ನೀಡಲು ಜೇಮ್ಸ್ ಮುಂದಾಗಿದ್ದ. ಆದ್ರೆ ಫ್ಲಾಶ್ ನಿಂದಾಗಿ ಫೋಟೋ ಸರಿಯಾಗಿ ಬರಲಿಲ್ಲ. ನಂತ್ರ ಜ್ಯೂರಿ ಸದಸ್ಯರ ಮುಂದೆ 3-5 ಸೆಕೆಂಡ್ ಒಳಗೆ ಪ್ಯಾಂಟ್ ಬಿಚ್ಚಿ ಖಾಸಗಿ ಅಂಗ ತೋರಿಸಿದ್ದಾನೆ ಆರೋಪಿ.

ಮಹಿಳೆ ಮೇಲೆ ಅತ್ಯಾಚಾರವೆಸಗಿದ ಆರೋಪಿ ಈತನಲ್ಲವೆಂದು ಕೋರ್ಟ್ ತೀರ್ಪು ನೀಡಿದೆ. ಆದ್ರೆ ಜೇಮ್ಸ್ ಗೆ ಬಿಡುಗಡೆ ಸಿಕ್ಕಿಲ್ಲ. 10 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಆರೋಪ ಎದುರಿಸುತ್ತಿರುವ ಜೇಮ್ಸ್ 65 ವರ್ಷ ಜೈಲಿನಲ್ಲಿ ಕಳೆಯಬೇಕಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...