alex Certify
ಕನ್ನಡ ದುನಿಯಾ       Mobile App
       

Kannada Duniya

ಸೌದಿ ಯುವತಿಗೆ ಕೆನಡಾದಲ್ಲಿ ಆಶ್ರಯ – ರಹಾಫ್ ಮುಹಮ್ಮದ್ ಅಲ್ ಖುನೂನ್ ಈಗ ‘ನಿರಾಳ’

ಬ್ಯಾಂಕಾಕ್ ಏರ್ಪೋರ್ಟಲ್ಲಿ ಸಿಕ್ಕಿಹಾಕಿಕೊಂಡಿದ್ದ ಸೌದಿಯ ಯುವತಿ ರಹಾಫ್ ಮುಹಮ್ಮದ್ ಅಲ್ ಖುನೂನ್ ಗೆ ಈಗ ಕೆನಡಾದಲ್ಲಿ ಆಶ್ರಯ ಸಿಕ್ಕಿದೆ. 18 ವರ್ಷದ ರಹಾಫ್ ತನ್ನನ್ನು ತಮ್ಮ ಮನೆಯವರೇ ಸಾಯಿಸಬಹುದು ಎಂಬ ಭಯ ಇದೆ ಎಂಬುದಾಗಿ ಹೇಳಿಕೊಂಡಿದ್ದಳು.

ಆಕೆಯನ್ನು ಶನಿವಾರ ಬ್ಯಾಂಕಾಕ್ ವಿಮಾನ ನಿಲ್ದಾಣದಲ್ಲಿ ತಡೆದ ಇಮ್ಮಿಗ್ರೇಷನ್ ಅಧಿಕಾರಿಗಳು, ಅವಳ ಪ್ರವೇಶವನ್ನು ನಿರಾಕರಿಸಿ, ಪಾಸ್‍ ಪೋರ್ಟ್ ಕೂಡ ವಶಪಡಿಸಿಕೊಂಡಿದ್ದರು. ಆ ಬಳಿಕ ಹೋಟೆಲ್ ರೂಮ್ ಒಳಗೆ ಇದ್ದುಕೊಂಡು ಸೋಷಿಯಲ್ ಮೀಡಿಯಾ ಕ್ಯಾಂಪೇನ್ ಮಾಡಿದ ಆಕೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಳು.

ಇದನ್ನು ಗಮನಿಸಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ, ರಹಾಫ್‍ಳನ್ನು ನಿರಾಶ್ರಿತೆ ಎಂದು ಸ್ವೀಕರಿಸಿ ಆಶ್ರಯ ನೀಡುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕೆನಡಾಗೆ ತೆರಳಿದ ರಹಾಪ್, ಈಗ ಅಲ್ಲಿ ಆಸರೆ ಪಡೆದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...