alex Certify
ಕನ್ನಡ ದುನಿಯಾ       Mobile App
       

Kannada Duniya

ಚಪ್ಪಲಿಯನ್ನು ನುಂಗಿದ್ದ ಹೆಬ್ಬಾವಿಗೆ ಯಶಸ್ವಿ ಸರ್ಜರಿ

ಮನೆಗೆ ನುಗ್ಗಿದ್ದ ಹೆಬ್ಬಾವೊಂದು ಚಪ್ಪಲಿಯನ್ನು ನುಂಗಿದ್ದು, ಅದನ್ನು ಜೀರ್ಣಿಸಿಕೊಳ್ಳಲಾಗದೆ ಪರದಾಡುತ್ತಿದ್ದ ವೇಳೆ ಪಶು ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ಚಪ್ಪಲಿಯನ್ನು ಹೊರ ತೆಗೆದಿದ್ದಾರೆ.

ಘಟನೆ ಆಸ್ಟ್ರೇಲಿಯಾದ ಮೌಂಟ್ ಒಮೆನಿ ಎಂಬಲ್ಲಿ ನಡೆದಿದ್ದು, ಚಪ್ಪಲಿ ನುಂಗಿ ಕಷ್ಟಪಡುತ್ತಿದ್ದ ಹೆಬ್ಬಾವನ್ನು ಪ್ರಾಣಿ ಸಂರಕ್ಷಕರೊಬ್ಬರು ಪಶು ವೈದ್ಯಾಲಯಕ್ಕೆ ಹಿಡಿದು ತಂದಿದ್ದರು.

ಬಳಿಕ ವೈದ್ಯರು ಹಾವಿಗೆ ಅರವಳಿಕೆ ಮದ್ದು ನೀಡಿ ಶಸ್ತ್ರ ಚಿಕಿತ್ಸೆ ನಡೆಸಿ ಚಪ್ಪಲಿಯನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ಹಾವು ಈಗ ಚೇತರಿಸಿಕೊಳ್ಳುತ್ತಿದ್ದು, ಸಂಪೂರ್ಣವಾಗಿ ಗುಣಮುಖವಾದ ಬಳಿಕ ಕಾಡಿಗೆ ಬಿಡಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...