alex Certify
ಕನ್ನಡ ದುನಿಯಾ       Mobile App
       

Kannada Duniya

ದಣಿದವರಿಗೆ ಅದ್ಭುತವಾಗಿ ಮಸಾಜ್ ಮಾಡುತ್ತೆ ಹೆಬ್ಬಾವು….

python

ಒತ್ತಡದ ಬದುಕಿನಿಂದ ರೋಸಿ ಹೋಗಿರೋ ಜನರೆಲ್ಲ ಮಸಾಜ್ ಮೊರೆಹೋಗ್ತಾರೆ. ಇದರಿಂದ ದೇಹ ಮತ್ತು ಮನಸ್ಸು ಫುಲ್ ರಿಲ್ಯಾಕ್ಸ್ ಆಗುತ್ತೆ. ಜರ್ಮನಿಯ ಪಾರ್ಲರ್ ಒಂದರಲ್ಲಿ ಅದ್ಭುತವಾಗಿ ಮಸಾಜ್ ಮಾಡಲಾಗುತ್ತದೆ. ಆದ್ರೆ ಮಸಾಜ್ ಮಾಡುವವರು ಮನುಷ್ಯರಲ್ಲ, ಭಯಾನಕ ಹೆಬ್ಬಾವು.

ಹೌದು, ಈ ಹೆಬ್ಬಾವು ಕುತ್ತಿಗೆಗೆ ಚೆನ್ನಾಗಿ ಮಸಾಜ್ ಮಾಡುತ್ತದೆ. ಈ ವಿಶಿಷ್ಟ ಮಸಾಜ್ ನ ಅನುಭವ ಪಡೆಯಲು ಗ್ರಾಹಕರು ಮುಗಿಬೀಳ್ತಿದ್ದಾರೆ. ಈ ಹೆಬ್ಬಾವಿನ ಹೆಸರು ಮೊಂಟಿ, ಕತ್ತು ಹಿಡಿದುಕೊಂಡಂತಾಗಿದ್ರೆ, ನೋವಿದ್ರೆ ಎಲ್ಲದಕ್ಕೂ ಈ ಹೆಬ್ಬಾವು ಮಸಾಜ್ ಮೂಲಕ ಪರಿಹಾರ ಒದಗಿಸುತ್ತದೆ.

ಕಳೆದ 13 ವರ್ಷಗಳಿಂದ ಈ ಪಾರ್ಲರ್ ನಲ್ಲಿ ಹೆಬ್ಬಾವು ಬಳಸಿಕೊಂಡು ಮಸಾಜ್ ಮಾಡಲಾಗ್ತಿದೆ. ದಿನೇ ದಿನೇ ಈ ಮಸಾಜ್ ಪಾರ್ಲರ್ ಜನಪ್ರಿಯವಾಗ್ತಿದೆ. ಹೆಬ್ಬಾವಿನ ಮಸಾಜ್ ಸಂಪೂರ್ಣ ಉಚಿತ. ಆದ್ರೆ ಗ್ರಾಹಕರೇ ಇಷ್ಟಪಟ್ಟು ಹೆಬ್ಬಾವಿನ ಆರೈಕೆಗಾಗಿ ಹಣ ಕೊಟ್ಟು ಹೋಗ್ತಾರೆ. ಹಾವು ಪ್ರಿಯರಿಗೆ ಈ ಮಸಾಜ್ ಅದ್ಭುತ ಅನುಭವ ನೀಡೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ ಹಾವನ್ನು ಕಂಡ್ರೆ ಭಯಪಡುವವರು ಈ ಸಾಹಸಕ್ಕೆ ಕೈಹಾಕಬೇಡಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...