alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ಸಿಬ್ಬಂದಿಯ ಯಡವಟ್ಟಿಗೆ ಬಲಿಯಾಯ್ತು ಶ್ವಾನ

ಅಮೆರಿಕ ಮೂಲದ ಯುನೈಟೆಡ್ ಏರ್ ಲೈನ್ಸ್ ನಲ್ಲಿ ಅಮಾನವೀಯ ಕೃತ್ಯವೊಂದು ನಡೆದಿದೆ. ವಿಮಾನ ಸಿಬ್ಬಂದಿ ನಾಯಿಯ ಸಾವಿಗೆ ಕಾರಣರಾಗಿದ್ದಾರೆ.

ಮಹಿಳೆಯೊಬ್ಬಳು ನಾಯಿಯನ್ನು ಕೂಡ ವಿಮಾನದೊಳಕ್ಕೆ ತಂದಿದ್ಲು. ನಾಯಿಗೆ ಅಂತಾನೇ ಸೀಟಿನ ಕೆಳಭಾಗದಲ್ಲಿ ಪ್ರತ್ಯೇಕ ಕ್ಯಾರಿಯರ್ ಕೂಡ ಇತ್ತು. ಆದ್ರೂ ಸಿಬ್ಬಂದಿ ನಾಯಿಯನ್ನು ಮುಚ್ಚಳವಿದ್ದ ಪೆಟ್ಟಿಗೆಯೊಂದರಲ್ಲಿ ಹಾಕುವಂತೆ ಬಲವಂತ ಮಾಡಿದ್ದಾರೆ. ಆ ಪೆಟ್ಟಿಗೆಯಲ್ಲಿ ಗಾಳಿಯಾಡಲು ರಂಧ್ರವೂ ಇರಲಿಲ್ಲ.

ನೀರು, ಗಾಳಿ ಯಾವುದೂ ಸಿಗದೇ ನಾಯಿ ಮೃತಪಟ್ಟಿದೆ. ಮೂರು ಗಂಟೆಗಳ ಬಳಿಕ ಪೆಟ್ಟಿಗೆ ತೆರೆದು ನೋಡಿದ್ರೆ, ಮುಗ್ಧ ಶ್ವಾನ ಶವವಾಗಿ ಹೋಗಿತ್ತು. ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳು ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾಳೆ.

ವಿಮಾನ ಸಿಬ್ಬಂದಿಯ ಅಮಾನವೀಯ ವರ್ತನೆಗೆ ಆಕ್ರೋಶ ಹೊರಹಾಕಿದ್ದಾನೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಯುನೈಟೆಡ್ ಏರ್ ಲೈನ್ಸ್ ಕ್ಷಮೆ ಕೇಳಿದೆ. ಇದೊಂದು ದುರದೃಷ್ಟಕರ ಘಟನೆ ಅಂತಾ ಹೇಳಿಕೊಂಡಿದೆ.

Today, I boarded my first United Airlines flight.On my way, I saw a Frenchie that looked identical to my own precious…

Posted by June Lara on Monday, March 12, 2018

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...