alex Certify
ಕನ್ನಡ ದುನಿಯಾ       Mobile App
       

Kannada Duniya

ದಿನದ ಮಟ್ಟಿಗೆ ಕೆನಡಾ ಪ್ರಧಾನಿಯಾದ ಭಾರತೀಯ ಯುವಕ

 

Prabjote-Lakhanpalಭಾರತ ಮೂಲದ ಯುವಕನೊಬ್ಬ ಒಂದು ದಿನದ ಮಟ್ಟಿಗೆ ಕೆನಡಾದ ಪ್ರಧಾನಿಯಾಗಿದ್ದಾನೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಯುವಕನ ಬಯಕೆಯನ್ನು ಅರಿತ ಕೆನಡಾದ ‘ಮೇಕ್ ಎ ವಿಶ್ ಪೌಂಡೇಶನ್’ ಈ ವ್ಯವಸ್ಥೆ ಮಾಡಿತ್ತು.

ಭಾರತದ ಪಂಜಾಬ್ ಮೂಲದ ಸುರೀಂದರ್ ಮೋಹನ್ ಸಿಂಗ್ ಲಖನ್ ಪಾಲ್ ಕುಟುಂಬ 1988 ರಿಂದಲೂ ಕೆನಡಾದ ಬ್ರಾಂಪ್ಟನ್ ನಲ್ಲಿ ನೆಲೆಸಿದ್ದು, ಅವರ ಪುತ್ರ ಪ್ರಭಜೋತೆ ಲಖನ್ ಪಾಲ್ (ಪಿಜೆ) ಕ್ಯಾನ್ಸರ್ ನಿಂದ ಬಳಲುತ್ತಿದ್ದ.

ಪಿಜೆ ಮುಂದೆ ರಾಜಕೀಯ ಕ್ಷೇತ್ರ ಪ್ರವೇಶಿಸಬೇಕೆಂಬ ಬಯಕೆ ಹೊಂದಿದ್ದ. ಈತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಆತನ ಮನದಿಂಗಿತ ಅರಿತ ‘ಮೇಕ್ ಎ ವಿಷ್ ಪೌಂಡೇಶನ್’ ಈ ವಿಚಾರವನ್ನು ಕೆನಡಾ ಪ್ರಧಾನ ಮಂತ್ರಿ ಕಛೇರಿಯ ಗಮನಕ್ಕೆ ತಂದಿತ್ತು. ಕೊನೆಗೆ ಪಿಜೆ ಯನ್ನು ಒಟ್ಟಾವಕ್ಕೆ ಕರೆಸಿಕೊಂಡು ಒಂದು ದಿನದ ಮಟ್ಟಿಗೆ ಪ್ರಧಾನಿಯಾಗಿಸಿ ಗೌರವಾದರಗಳನ್ನು ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...