alex Certify
ಕನ್ನಡ ದುನಿಯಾ       Mobile App
       

Kannada Duniya

ಕೆನಡಾದಲ್ಲಿ ಪಂಜಾಬ್ ಮೂಲದ ಯುವಕನ ಹತ್ಯೆ

punjab-man-shot-dead-in-canada-by-unidentified-gunmanಕೆನಡಾದಲ್ಲಿ ತನ್ನ ಕುಟುಂಬದೊಂದಿಗೆ ನೆಲೆಸಿದ್ದ ಪಂಜಾಬ್ ಮೂಲದ ಯುವಕನನ್ನು ಅಪರಿಚಿತ ದುಷ್ಕರ್ಮಿಯೊಬ್ಬ ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಸೋಮವಾರದಂದು ಅಬಾಟ್ಸ್ಫೋರ್ಡ್ ನಲ್ಲಿ ಈ ಘಟನೆ ನಡೆದಿದೆ.

ಸತ್ಕಾರ್ ಸಿಂಗ್ ಸಿದ್ದು ಎಂಬ 23 ವರ್ಷದ ಯುವಕ ಹತ್ಯೆಯಾದವನಾಗಿದ್ದು, ಮೂಲತಃ ಪಂಜಾಬ್ ನ ಮೋಗಾ ಜಿಲ್ಲೆಯ ಚಾಂದ್ ಪುರಾನಾ ಗ್ರಾಮದಲ್ಲಿದ್ದ ಈತನ ಕುಟುಂಬ 90 ರ ದಶಕದಲ್ಲಿ ಕೆನಡಾಕ್ಕೆ ತೆರಳಿ ನೆಲೆಸಿತ್ತು.

ವಿದ್ಯಾಭ್ಯಾಸದ ನಂತರ ಸಿಸಿ ಟಿವಿ ಕ್ಯಾಮರಾ ಅಳವಡಿಕೆ ಕಾರ್ಯದಲ್ಲಿ ತೊಡಗಿದ್ದ ಸತ್ಕಾರ್ ಸಿಂಗ್ ಸಿದ್ದು, ಸೋಮವಾರದಂದು ತನ್ನ ಸಹೋದರನನ್ನು ಕಾಲೇಜಿಗೆ ಬಿಡಲು ತೆರಳುತ್ತಿದ್ದ ವೇಳೆ ಅಪರಿಚಿತ ಬಂದೂಕುಧಾರಿ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಯ ಪತ್ತೆಗೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...