alex Certify
ಕನ್ನಡ ದುನಿಯಾ       Mobile App
       

Kannada Duniya

ಖಗ್ರಾಸ ಸೂರ್ಯಗ್ರಹಣದಿಂದ ಅಮೆರಿಕಾಕ್ಕೆ 4486 ಕೋಟಿ ರೂ. ನಷ್ಟ

eclipse-in-usa-afp-650_650x400_61503280276

ಅಮೆರಿಕಾ 100 ವರ್ಷಗಳ ಕಾಯುವಿಕೆ ಇಂದು ಮುಕ್ತಾಯವಾಗಲಿದೆ. 2017ರಲ್ಲಿ ಅಮೆರಿಕಾದಲ್ಲಿ ಖಗ್ರಾಸ ಸೂರ್ಯಗ್ರಹಣ ಗೋಚರಿಸಲಿದೆ. 21ನೇ ಶತಮಾನದಲ್ಲಿ ಮೊದಲ ಬಾರಿ ಅಮೆರಿಕಾದಲ್ಲಿ ಖಗ್ರಾಸ ಸೂರ್ಯ ಗ್ರಹಣ ನೋಡಲು ಅವಕಾಶ ಸಿಗ್ತಾ ಇದ್ದು, ಕೆಲವು ಕಂಪನಿಗಳು ರಜೆ ಘೋಷಣೆ ಮಾಡಿವೆ.

ಫೋರ್ಬ್ಸ್ ವರದಿ ಪ್ರಕಾರ ಗ್ರಹಣದಿಂದಾಗಿ ಅಮೆರಿಕಾಕ್ಕೆ 4486 ಕೋಟಿ ರೂ. ನಷ್ಟವಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಕೆಲ ಕ್ಷೇತ್ರಗಳಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟವುಂಟಾಗಲಿದೆ. ಗ್ರಹಣದಿಂದಾಗಿ ಅಮೆರಿಕಾದ ಐಟಿ ಕ್ಷೇತ್ರ ಹಾಗೂ ಉತ್ಪಾದನಾ ಕ್ಷೇತ್ರಕ್ಕೆ ನಷ್ಟವುಂಟಾಗಲಿದೆ. ಈ ಕಂಪನಿಗಳು ಗ್ರಹಣ ಹಿನ್ನೆಲೆಯಲ್ಲಿ ರಜೆ ನೀಡಿವೆ ಎನ್ನಲಾಗ್ತಿದೆ.

ಇನ್ನು ಕೆಲ ಕಂಪನಿಗಳು ಗ್ರಹಣ ಹಿನ್ನೆಲೆಯಲ್ಲಿ ಲಾಭ ಗಳಿಸುವ ಸಾಧ್ಯತೆಯಿದೆ. ಗ್ರಹಣವನ್ನು ವೀಕ್ಷಿಸಲು ಜನರನ್ನು ಪ್ರೇರೇಪಿಸಲಾಗ್ತಿದೆ. ಗ್ರಹಣವನ್ನು ಗಮನದಲ್ಲಿಟ್ಟುಕೊಂಡು ಆಹಾರ ಕಂಪನಿಗಳು ಕಾಫಿ, ಕೇಕ್, ಐಸ್ ಕ್ರೀಂ ಸೇರಿದಂತೆ ವಿವಿಧ ತಿಂಡಿಗಳನ್ನು ಮಾರುಕಟ್ಟೆಗೆ ಬಿಟ್ಟಿವೆ. ಸೂರ್ಯ ಗ್ರಹಣದ ವೇಳೆ ಈ ಆಹಾರಗಳು ತಿನ್ನಲು ಯೋಗ್ಯವಾಗಿವೆ ಎಂದು ಜಾಹೀರಾತು ನೀಡಲಾಗ್ತಿದೆ.

ಕನ್ನಡಕ ಹಾಗೂ ಕ್ಯಾಮರಾ ಕಂಪನಿಗಳು ಕೂಡ ಲಾಭ ಪಡೆಯುತ್ತಿವೆ. ಸೂರ್ಯ ಗ್ರಹಣ ವೀಕ್ಷಣೆಗೆ ಇವು ಸೂಕ್ತ ಕನ್ನಡಕ ಎಂದು ಜಾಹೀರಾತು ನೀಡಿ ಜನರನ್ನು ಆಕರ್ಷಿಸುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...