alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ಸುಖ ಅನುಭವಿಸಿದವನಿಗೆ ಉಚಿತ ಸೇವೆ ನೀಡಿದ ವೇಶ್ಯೆ

fr78

ಮನುಷ್ಯರಿಗೆ ಲೈಂಗಿಕ ಬಯಕೆ ಪ್ರಾಪ್ತ ವಯಸ್ಕರಾಗುತ್ತಿದ್ದಂತೆಯೇ ಸಹಜವಾಗಿ ಬರುತ್ತದೆ. ಇದನ್ನು ತಡೆಗಟ್ಟಲು ಸಾಧ್ಯವಾಗುವುದಿಲ್ಲ. ಆದರೆ, ಅಪಘಾತದಲ್ಲಿ ತನ್ನ ಜನನಾಂಗವನ್ನೇ ಕಳೆದುಕೊಂಡು, ಇದರಿಂದ ವಂಚಿತನಾಗಿ ಪರಿತಪಿಸುತ್ತಿದ್ದ, ವ್ಯಕ್ತಿಯೊಬ್ಬನ ಆಸೆ ವೈದ್ಯರ ಪ್ರಯತ್ನದಿಂದ ಕೊನೆಗೂ ಈಡೇರಿದೆ.

ಈ ಸಂಭ್ರಮವನ್ನು ಆತ ಖುಷಿಯಿಂದಲೇ ಅನುಭವಿಸಿದ್ದಾನೆ. ಅಂದಹಾಗೇ ಲೈಂಗಿಕ ಕ್ರಿಯೆಗಾಗಿ ಆತ, ಬರೋಬ್ಬರಿ 26 ವರ್ಷಗಳಿಂದ ಕಾಯುತ್ತಿದ್ದ. ಸ್ಕಾಟ್ ಲೆಂಡ್ ನಿವಾಸಿಯಾಗಿರುವ ಈ ವ್ಯಕ್ತಿ, 6 ವರ್ಷದವನಿದ್ದ ಸಂದರ್ಭದಲ್ಲಿ ನಡೆದ ಭೀಕರ ಕಾರ್ ಅಪಘಾತದಲ್ಲಿ ತನ್ನ ಜನನಾಂಗವನ್ನೇ ಕಳೆದುಕೊಂಡಿದ್ದ.

ಹರೆಯಕ್ಕೆ ಬರುತ್ತಿದ್ದಂತೆ ಅವನಿಗೆ ಲೈಂಗಿಕ ಆಸಕ್ತಿ ಬಂದರೂ, ಅದನ್ನು ಈಡೇರಿಸಿಕೊಳ್ಳಲು ಜನನಾಂಗವೇ ಇರಲಿಲ್ಲ. ಆತನಿಗೆ 44 ವರ್ಷವಾದ ಸಂದರ್ಭದಲ್ಲಿ ಆತನದ್ದೇ ಕೈಯಲ್ಲಿನ ಚರ್ಮವನ್ನು ಬಳಸಿಕೊಂಡು ಕೃತಕವಾಗಿ ಜನನಾಂಗ ಸೃಷ್ಟಿಸುವ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಚೇತರಿಸಿಕೊಂಡ ಆತ ಸೀದಾ ವೇಶ್ಯೆಯೊಬ್ಬಳ ಬಳಿಗೆ ಹೋಗಿದ್ದಾನೆ.

ತನ್ನಲ್ಲಿ ಇಷ್ಟು ವರ್ಷಗಳಿಂದ ಹಿಡಿದಿಟ್ಟುಕೊಂಡಿದ್ದ ಬಯಕೆಯನ್ನು ಈಡೇರಿಸಿಕೊಂಡಿದ್ದಾನೆ. ಅವನೊಂದಿಗೆ ಇದರಲ್ಲಿ ಪಾಲ್ಗೊಂಡಿದ್ದ ವೇಶ್ಯೆ, ಇದೊಂದು ಅಪರೂಪದ ಕ್ಷಣ ಎಂದು ಹೇಳಿದ್ದಾಳೆ. ಅಲ್ಲದೇ, ಬೇರೆಯವರಿಗಾದರೆ 15 ಸಾವಿರ ರೂ. ಪಡೆದುಕೊಳ್ಳುತ್ತಿದ್ದೆ. ಈತನಿಗಾಗಿ ಯಾವುದೇ ಶುಲ್ಕ ಪಡೆಯದೇ ಸುಖ ನೀಡಿದ್ದೇನೆ ಎಂದು ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...