alex Certify
ಕನ್ನಡ ದುನಿಯಾ       Mobile App
       

Kannada Duniya

ಉಗ್ರನ ಜೊತೆ ಕುಲಭೂಷಣ್ ಜಾಧವ್ ವಿನಿಮಯಕ್ಕೆ ಮುಂದಾಗಿತ್ತು ಪಾಕ್

ಪೇಶಾವರದಲ್ಲಿ ಶಾಲೆಯ ಮೇಲೆ ದಾಳಿ ನಡೆಸಿದ ಭಯೋತ್ಪಾದಕನನ್ನು ಭಾರತದ ಕುಲಭೂಷಣ್ ಜಾಧವ್ ಜೊತೆಗೆ ಅದಲು ಬದಲು ಮಾಡಿಕೊಳ್ಳಲು ಪಾಕಿಸ್ತಾನ ಮುಂದಾಗಿತ್ತು ಅನ್ನೋ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಆ ಭಯೋತ್ಪಾದಕ ಸದ್ಯ ಅಫ್ಘಾನಿಸ್ತಾನದ ಜೈಲಿನಲ್ಲಿದ್ದಾನೆ.

ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಬೇಹುಗಾರಿಕೆ ಆರೋಪದ ಮೇಲೆ ಪಾಕಿಸ್ತಾನ ಬಂಧಿಸಿತ್ತು. ಕಳೆದ ಏಪ್ರಿಲ್ ನಲ್ಲಿ ಕುಲಭೂಷಣ್ ಜಾಧವ್ ಗೆ ಪಾಕ್ ಸೇನಾ ನ್ಯಾಯಾಲಯ ಮರಣ ದಂಡನೆ ಕೂಡ ವಿಧಿಸಿತ್ತು.

ಭದ್ರತಾ ಸಲಹೆಗಾರರೊಬ್ಬರು ಪೇಶಾವರದ ಶಾಲೆ ಮೇಲೆ ದಾಳಿ ನಡೆಸಿದ್ದ ಭಯೋತ್ಪಾದಕನೊಂದಿಗೆ ಜಾಧವ್ ವಿನಿಮಯಕ್ಕೆ ಪ್ರಸ್ತಾವನೆ ಇಟ್ಟಿದ್ದರು ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಖಾವಾಜಾ ಮೊಹಮ್ಮದ್ ಆಸೀಫ್  ಹೇಳಿದ್ದಾರೆ.

ಆದ್ರೆ ಈ ಪ್ರಸ್ತಾವನೆ ಸಲ್ಲಿಸಿದ್ದ ರಾಷ್ಟ್ರೀಯ ಭದ್ರತಾ ಸಲಹೆಗಾರ ಯಾರು ಅನ್ನೋದನ್ನು ಬಹಿರಂಗಪಡಿಸಿಲ್ಲ. ವಿನಿಮಯ ಮಾಡಿಕೊಳ್ಳಲು ಮುಂದಾಗಿದ್ದ ಆಫ್ಘಾನಿಸ್ತಾನದ ಭಯೋತ್ಪಾದಕನ ಹೆಸರನ್ನು ಕೂಡ ಸಚಿವ ಬಾಯ್ಬಿಟ್ಟಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...