alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಿಗೂ ತರಗತಿಗೆ ಹಾಜರಾಗಲು ಅವಕಾಶ ಕೊಟ್ರು ಪ್ರೊಫೆಸರ್

ಪೊಲಿಟಿಕಲ್ ಸೈನ್ಸ್ ಕ್ಲಾಸ್ ನಲ್ಲಿ ಕೂತು ನಾಯಿ ಆಸಕ್ತಿಯಿಂದ ಪಾಠ ಕೇಳೋದನ್ನು ಎಲ್ಲಾದ್ರೂ ನೋಡಿದ್ದೀರಾ? ಆದ್ರೆ ಲೂನಾ ಅನ್ನೋ ಈ ಮುದ್ದಾದ ಹೆಣ್ಣು ನಾಯಿ ತರಗತಿಗೆ ಹಾಜರಾಗಿದೆ.

ಜೆಸ್ಸಿಕಾ ಲೂಯಿಸ್ ಅಮೆರಿಕದ ಜಾರ್ಜಿಯಾ ಸೌತರ್ನ್ ಯೂನಿವರ್ಸಿಟಿಯ ವಿದ್ಯಾರ್ಥಿನಿ. ಚಂಡಮಾರುತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೆಸ್ಸಿಕಾ ಮುದ್ದಿನ ನಾಯಿಯನ್ನು ಕರೆದುಕೊಂಡು ಮನೆಗೆ ಹೋಗಬೇಕಿತ್ತು. ಆದ್ರೆ ತರಗತಿಯನ್ನು ಮಿಸ್ ಮಾಡಿಕೊಳ್ಳುವಂತಿರಲಿಲ್ಲ. ಕ್ಲಾಸ್ ಮುಗಿಯೋವರೆಗೆ ನಾಯಿಯನ್ನು ಏನ್ಮಾಡೋದು ಅನ್ನೋ ಯೋಜನೆ ಜೆಸ್ಸಿಕಾಗೆ ಶುರುವಾಗಿತ್ತು.

ಕೊನೆಗೆ ಜೆಸ್ಸಿಕಾ ಪ್ರಾಧ್ಯಾಪಕರಿಗೆ ಇಮೇಲ್ ಒಂದನ್ನು ಕಳಿಸಿದ್ಲು. ತರಗತಿಗೆ ನಾಯಿಯನ್ನು ಕರೆತರಲು ಅವಕಾಶ ಕೊಡಿ ಅಂತಾ ಕೇಳಿದ್ಲು. ಲೂನಾ ತುಂಬಾ ಶಿಸ್ತಿನ ನಾಯಿ, ಪಾಠಕ್ಕೆ ಅಡ್ಡಿ ಮಾಡೋದಿಲ್ಲ ಅಂತಾನೂ ಭರವಸೆ ಕೊಟ್ಟಿದ್ಲು. ಪ್ರೊಫೆಸರ್ ಜೋಶುವಾ ಕೆನಡಿ ಕೂಡ ಅದಕ್ಕೆ ಸಮ್ಮತಿ ನೀಡಿದ್ರು.

ಕೊನೆಗೆ ಲೂನಾ ತನ್ನ ಒಡತಿಯ ಜೊತೆಗೆ ತರಗತಿಗೆ ತೆರಳಿದೆ. ಪೊಲಿಟಿಕಲ್ ಸೈನ್ಸ್ ಕ್ಲಾಸ್ ನಲ್ಲಿ ಆಸಕ್ತಿಯಿಂದ ಪಾಠ ಆಲಿಸಿದೆ. ವಿಶೇಷ ಅಂದ್ರೆ ಸ್ವಲ್ಪ ಕೂಡ ತಂಟೆ ತಕರಾರು ಮಾಡದೆ ನಾಯಿ ತರಗತಿಯಲ್ಲಿ ಸೈಲೆಂಟ್ ಆಗಿ ಕುಳಿತಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...