alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಲದ ಸುಳಿಯಲ್ಲಿ ನಟಿ ಪ್ರಿಯಾಂಕಾ ಭಾವಿ ಮಾವ

ಬಾಲಿವುಡ್, ಹಾಲಿವುಡ್ ಗಳೆರಡರಲ್ಲೂ ತನ್ನ ಛಾಪು ಮೂಡಿಸಿರುವ ಪ್ರಿಯಾಂಕಾ ಚೋಪ್ರಾ ವರಿಸಲಿರುವ ಅಮೆರಿಕದ ಸಿಂಗರ್ ನಿಕಿ ಜೋನಾಸ್ ಕುಟುಂಬಕ್ಕೆ ದಿಢೀರನೇ ಆರ್ಥಿಕ ಸಂಕಷ್ಟವೊದಗಿದೆ.

ಪ್ರಿಯಾಂಕಾ ಭಾವಿ ಮಾವ ಅಂದರೆ ನಿಕಿ ತಂದೆ ಪಾಲ್ ಜೋನಾಸ್ ಅವರು ನಡೆಸುತ್ತಿರುವ ರಿಯಲ್ ಎಸ್ಟೇಟ್ ಕಂಪನಿ ನಷ್ಟಕ್ಕೊಳಗಾಗಿದ್ದು, ಸುಮಾರು 18 ಮಿಲಿಯನ್ ಡಾಲರ್ ನಷ್ಟು ಸಾಲದ ಸುಳಿಯಲ್ಲಿ ಸಿಲುಕಿದೆ.

ಇಷ್ಟೇ ಅಲ್ಲದೆ ಕೋರ್ಟ್ ನಲ್ಲಿ ಈ ಕೇಸ್ ಸೋತಿರುವುದರಿಂದ 2.68 ಲಕ್ಷ ಡಾಲರ್ ದಂಡವನ್ನೂ ತೆರಬೇಕು. ಈ ವಿಚಾರ ಮದುವೆಯ ತಯಾರಿಯಲ್ಲಿರುವ ಜೋನಾಸ್ ಕುಟುಂಬಕ್ಕೆ ತಲೆನೋವಾಗಿ ಪರಿಣಮಿತ್ತು. ಆದರೆ ಇದೀಗ ಆಗಿರುವ ನಷ್ಟವನ್ನು ತುಂಬಲು ಪಾಲ್ ಅವರು ತಮ್ಮ ಕೊಂಚ ಆಸ್ತಿಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ನ್ಯೂಜೆರ್ಸಿ ಕನ್ ಸ್ಟ್ರಕ್ಷನ್ ಆಂಡ್ ರಿಯಲ್ ಎಸ್ಟೇಟ್ ಕಂಪನಿಯನ್ನು ಪಾಲ್ ಮತ್ತವರ ಸಹೋದರರು ಒಟ್ಟಾಗಿ ನಡೆಸುತ್ತಿದ್ದರು. 2013ರಲ್ಲಿ ಪಾಲ್ ಅವರ ಇಬ್ಬರು ಸಹೋದರರು ಅವರ ಪಾಲಿನ ಶೇರನ್ನು ಮಾರಾಟ ಮಾಡಿ ಹೊರ ಬಂದ ಬಳಿಕ ಪಾಲ್ ಒಬ್ಬರೇ ನಿಭಾಯಿಸುತ್ತಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...