alex Certify
ಕನ್ನಡ ದುನಿಯಾ       Mobile App
       

Kannada Duniya

ಏಷ್ಯಾದ ಸೆಕ್ಸಿಯೆಸ್ಟ್ ಮಹಿಳೆ ಯಾರು ಗೊತ್ತಾ…?

ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಸದ್ಯ ವಿದೇಶದಲ್ಲಿ ನೆಲೆಸಿದ್ದಾಳೆ. ಹಾಲಿವುಡ್ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿರೋ ಪಿಗ್ಗಿ 2017ರ ಏಷ್ಯಾದ ಅತ್ಯಂತ ಸೆಕ್ಸಿ ಮಹಿಳೆ ಎಂಬ ಗೌರವವನ್ನು ತನ್ನದಾಗಿಸಿಕೊಂಡಿದ್ದಾಳೆ. ವಿಶೇಷ ಅಂದ್ರೆ ದೀಪಿಕಾ ಪಡುಕೋಣೆ ಹಾಗೂ ಪಾಕಿಸ್ತಾನದ ನಟಿ ಮಾಹಿರಾ ಖಾನ್ ಳನ್ನು ಕೂಡ ಪ್ರಿಯಾಂಕಾ ಹಿಂದಿಕ್ಕಿದ್ದಾಳೆ.

ಏಷ್ಯಾದ ಸೆಕ್ಸಿಯೆಸ್ಟ್ ಮಹಿಳೆಯರ ಪಟ್ಟಿಯಲ್ಲಿ ನಿಯಾ ಶರ್ಮಾ ಎರಡನೇ ಸ್ಥಾನ ಪಡೆದಿದ್ದು, ದೀಪಿಕಾ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾಳೆ. ಆಲಿಯಾ ಭಟ್ ಹಾಗೂ ಮಾಹಿರಾ ಖಾನ್ ನಂತರದ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಬ್ರಿಟನ್ ನಲ್ಲಿ ಇದಕ್ಕಾಗಿ ಆನ್ ಲೈನ್ ವೋಟಿಂಗ್ ನಡೆಸಲಾಗಿತ್ತು.

ಬಹುತೇಕ ಅಭಿಮಾನಿಗಳೆಲ್ಲ ಪ್ರಿಯಾಂಕಾ ಪರ ಮತ ಚಲಾಯಿಸಿದ್ದಾರೆ. ಅಭಿಮಾನಿಗಳಿಗೆ ಧನ್ಯವಾದ ಹೇಳಿರೋ ಪ್ರಿಯಾಂಕಾ, ಏಷ್ಯಾದ ಸೆಕ್ಸಿಯೆಸ್ಟ್ ವುಮನ್ ಟೈಟಲ್ ಗೆದ್ದಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಸದ್ಯ ನ್ಯೂಯಾರ್ಕ್ ನಲ್ಲಿ ಬೀಡುಬಿಟ್ಟಿರೋ ಪಿಗ್ಗಿ, ಕ್ವಾಂಟಿಕೋ – 3 ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...