alex Certify
ಕನ್ನಡ ದುನಿಯಾ       Mobile App
       

Kannada Duniya

ಫೋರ್ಬ್ಸ್ ಪ್ರಬಲ ಮಹಿಳೆಯರ ಪಟ್ಟಿಯಲ್ಲಿ ಪಿಗ್ಗಿಗೆ ಸ್ಥಾನ

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿರುವ ಪ್ರಿಯಾಂಕ ಮತ್ತೊಂದು ಸಾಧನೆ ಮಾಡಿದ್ದಾರೆ. ವಿಶ್ವದ 100 ಪ್ರಬಲ ಮಹಿಳೆಯರ ಪಟ್ಟಿಯಲ್ಲಿ ಪ್ರಿಯಾಂಕ ಜಾಗ ಪಡೆದಿದ್ದಾಳೆ. ಫೋರ್ಬ್ಸ್ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಇದೇ ಮೊದಲ ಬಾರಿ ಪಿಗ್ಗಿ ಸ್ಥಾನ ಪಡೆದಿದ್ದಾಳೆ.

ಫೋರ್ಬ್ಸ್ 2017ರ ಪ್ರಬಲ ಮಹಿಳೆಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದ್ರಲ್ಲಿ ಪ್ರಿಯಾಂಕ 97ನೇ ಸ್ಥಾನ ಪಡೆದಿದ್ದಾಳೆ, ಫೋರ್ಬ್ಸ್ ಬಿಡುಗಡೆ ಮಾಡಿದ ಈ ಪಟ್ಟಿಯಲ್ಲಿ ಜರ್ಮನಿಯ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಮೊದಲ ಸ್ಥಾನದಲ್ಲಿದ್ದಾರೆ.

ಮಾಧ್ಯಮ ಹಾಗೂ ಮನರಂಜನಾ ಕ್ಷೇತ್ರದ 15 ಪ್ರಬಲ ಮಹಿಳೆಯರ ಪಟ್ಟಿಯಲ್ಲೂ ಪ್ರಿಯಾಂಕ ಸ್ಥಾನ ಪಡೆದಿದ್ದರು. ಫೋರ್ಬ್ಸ್ ಪ್ರಕಾರ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಮಹಿಳೆಯರಲ್ಲಿ ಪ್ರಿಯಾಂಕ ಎರಡನೇ ಅತಿ ಚಿಕ್ಕ ವಯಸ್ಸಿನ ಮಹಿಳೆಯಾಗಿದ್ದಾಳೆ. ಟೇಲರ್ ಸ್ವಿಪ್ಟ್ ಕೂಡ ಪ್ರಬಲ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಅವರ ವಯಸ್ಸು 27 ವರ್ಷ.

ಈ ಪಟ್ಟಿಯಲ್ಲಿ ಭಾರತದ ಇನ್ನೂ ಕೆಲ ಮಹಿಳೆಯರು ಸ್ಥಾನ ಪಡೆದಿದ್ದಾರೆ. ಇಂದ್ರಾ ನೂಯಿ 11 ನೇ  ಸ್ಥಾನ, ಚಂದಾ ಕೊಚ್ಚಾರ್  32 ನೇ ಸ್ಥಾನ  ಮತ್ತು ರೋಶನಿ ನಾದರ್ 57 ನೇ ಸ್ಥಾನ  ಪಡೆದಿದ್ದಾರೆ.

ಪ್ರಿಯಾಂಕ ಹಾಲಿವುಡ್ ನ ಅತ್ಯಂತ ಯಶಸ್ವಿ ಭಾರತದ ನಟಿಯಾಗಿದ್ದಾರೆ. ಪ್ರಿಯಾಂಕ ಸದ್ಯ ಹಾಲಿವುಡ್ ನಲ್ಲಿ ಕೆಲಸ ಮುಂದುವರೆಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...