alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲು ಹಕ್ಕಿಯೊಂದಿಗೆ ಹಾರಿದ ಮಹಿಳಾ ಸಿಬ್ಬಂದಿ…!

ಪ್ರೀತಿ ಕುರುಡು‌ ಎನ್ನುತ್ತಾರೆ. ಆದರೆ ಪ್ರೀತಿಗಾಗಿ‌ ಸರಕಾರಿ‌ ಕೆಲಸವನ್ನು ಬಿಟ್ಟು ಜೈಲಿನಿಂದ ಬಿಡುಗಡೆಯಾದ ಖೈದಿಯೊಂದಿಗೆ ಓಡಿ ಹೋಗಿರುವ ಜೈಲಾಧಿಕಾರಿಯ ಕಥೆ ಕೇಳಿಲ್ಲದಿದ್ದರೆ, ಇಲ್ಲಿದೆ ನೋಡಿ

ಸ್ಕಾಟ್ ಲ್ಯಾಂಡ್ ನ ಜೈಲಿನಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ 24 ವರ್ಷದ ಕ್ರಿಸ್ಟಿ ಡೇವಿಡ್ ಸನ್,‌ ಇದೀಗ ಜೈಲಿನಲ್ಲಿದ್ದ ಖೈದಿ ಬಿಡುಗಡೆಯಾಗುತ್ತಿದ್ದಂತೆ ತನ್ನ ಕೆಲಸ‌ವನ್ನು ಬಿಟ್ಟು ಆತನೊಂದಿಗೆ ಸುತ್ತಾಡುತ್ತಿದ್ದಾಳೆ ಎನ್ನುವ ಸುದ್ದಿ ಇದೀಗ ವೈರಲ್ ಆಗಿದೆ.

31 ವರ್ಷದ ಜ್ಯಾಮಿ ಬಂಟ್ಟಿಂಗ್ ಎನ್ನುವ ವ್ಯಕ್ತಿ ಬಿಡುಗಡೆಯಾದ ಎರಡು ದಿನದಲ್ಲಿ ಕೆಲಸಕ್ಕೆ ಕ್ರಿಸ್ಟಿ ರಾಜೀನಾಮೆ ನೀಡಿದ್ದಾಳೆ. ಆಕೆಯೊಂದಿಗಿರುವ ಫೋಟೋಗಳನ್ನು‌ ಬಂಟ್ಟಿಂಗ್ ತನ್ನ ಇಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದು, ಎರಡು ವಾರಗಳ‌ ವಿಶ್ರಾಂತಿ ಎಂದು ಬರೆದುಕೊಂಡಿದ್ದಾನೆ.

ಇನ್ನು ಕೆಲವರ ಪ್ರಕಾರ, ಯುವತಿ‌ ಮಾಜಿ ಖೈದಿಯನ್ನು ಪ್ರೀತಿಸುತ್ತಿದ್ದಳು. ಇಬ್ಬರು ಮಾತಾಡಿಕೊಂಡೆ ಓಡಿ‌‌ ಹೋಗಿದ್ದಾರೆ. ಆಕೆಯ ವಾಟ್ಸಾಪ್ ನಲ್ಲಿಯೂ‌ ಇಬ್ಬರು ಚುಂಬಿಸುವ ಫೋಟೋಗಳಿವೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...