alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕುಮಾರಿ ದಿನಚರಿ ಕೇಳಿ ದಂಗಾಗಿದ್ದಾರೆ ಜನ

ಸಾಮಾನ್ಯವಾಗಿ ಬೆಳಗ್ಗೆ ಬೇಗ ಏಳೋದು ಅಂದ್ರೆ ಎಲ್ಲರಿಗೂ ಬೇಜಾರು. ಅದ್ರಲ್ಲೂ ವೀಕೆಂಡ್ ಬಂತು ಅಂದ್ರೆ 10 ಗಂಟೆವರೆಗೂ ನಿದ್ದೆ ಮಾಡೋಣ ಅಂತಾನೇ ಆಸೆಪಡ್ತಾರೆ. ಮಹಿಳೆಯರ ಪಾಲಿಗೆ ಮಾತ್ರ ಈ ಕನಸು ನನಸಾಗೋದು ಕಷ್ಟ. ಮನೆ ಕೆಲಸ, ಮಕ್ಕಳ ಜವಾಬ್ಧಾರಿ, ಕ್ಲೀನಿಂಗ್ ಅಂತಾ ಕೆಲಸಗಳು ರಾಶಿಯಾಗಿ ಬಿದ್ದಿರುತ್ತವೆ.

ಆದ್ರೆ ರಾಜಕುಮಾರಿ ಮಾರ್ಗರೆಟ್ ಬೆಳಗಿನ ಸಮಯವನ್ನು ಯಾವ ರೀತಿ ಕಳೆಯುತ್ತಿದ್ಲು ಅನ್ನೋದನ್ನು ಕೇಳಿದ್ರೆ ಪ್ರತಿಯೊಬ್ಬರು ಆ ಸುಖ ಬೇಕು ಅಂದುಕೊಳ್ಳೋದು ಸಹಜ. ರಾಜಕುಮಾರಿ ಮಾರ್ಗರೆಟ್ ಬೆಳಗ್ಗೆ ಏಳ್ತಾ ಇದ್ದಿದ್ದೇ 9 ಗಂಟೆಗೆ.

ಹಾಸಿಗೆಯಲ್ಲಿ ಕುಳಿತೇ ತಿಂಡಿ ಮುಗಿಸುತ್ತಿದ್ಲು. ನಂತರ ಆರಾಮಾಗಿ 2 ಗಂಟೆಗಳ ಕಾಲ ರೇಡಿಯೋ ಆಲಿಸುತ್ತಿದ್ಲು. ಅದಾದ್ಮೇಲೆ ದಿನಪತ್ರಿಕೆಗಳನ್ನು ಓದೋದು. ಇವುಗಳ ಜೊತೆ ಜೊತೆಗೆ ಒಂದಾದ ಮೇಲೊಂದರಂತೆ ಸಿಗರೇಟ್ ಸೇದುತ್ತಿದ್ಲು. ಯಾಕಂದ್ರೆ ಆಕೆ ಚೈನ್ ಸ್ಮೋಕರ್ ಆಗಿದ್ಲು.

ಬೆಳಗ್ಗೆ 11 ಗಂಟೆಗೆ ಅವಳ ಸ್ನಾನದ ಸಮಯ. ಸಹಾಯಕಿಯೇ ಮಾರ್ಗರೆಟ್ ಗೆ ಸ್ನಾನ ಮಾಡಿಸುತ್ತಿದ್ಲು. ಆರಾಮಾಗಿ ಒಂದು ಗಂಟೆ ಸ್ನಾನ ಮಾಡಿದ್ಮೇಲೆ ಹೇರ್ ಸ್ಟೈಲ್, ಮೇಕಪ್ ಸರದಿ. ಸುಂದರ ಬಟ್ಟೆಗಳನ್ನು ಧರಿಸಿ 12.30ಕ್ಕೆ ಮಾರ್ಗರೆಟ್ ಕೋಣೆಯಿಂದ ಕೆಳಕ್ಕಿಳಿದು ಬರುತ್ತಿದ್ಲು.

ಅಲ್ಲಿ ಒಂದು ಪೆಗ್ ವೋಡ್ಕಾ ಹೀರಿದ ಮೇಲೆ 1 ಗಂಟೆಗೆ ತಾಯಿಯ ಜೊತೆಗೆ ಊಟ. ಬೆಳ್ಳಿ ಪಾತ್ರೆಗಳಲ್ಲಿ ಘಮಘಮಿಸುವ ತಿನಿಸುಗಳನ್ನು ಸರ್ವ್ ಮಾಡಲಾಗುತ್ತಿತ್ತು. ಅದರ ಜೊತೆಗೆ ಪ್ರತಿಯೊಬ್ಬರಿಗೂ ಅರ್ಧ ಬಾಟಲ್ ವೈನ್. ಬೇರೆ ಬೇರೆ ತೆರನಾದ ಅರ್ಧ ಡಜನ್ ನಷ್ಟು ಚೀಸ್ ಕೂಡ ಇರುತ್ತಿತ್ತು. ರಾಜಕುಮಾರಿಯ ದಿನಚರಿ ಕೇಳಿದವರೆಲ್ಲಾ ಅಂಥ ಅದೃಷ್ಟ ನಮಗಿಲ್ವಲ್ಲಾ ಅಂತಾ ಹೊಟ್ಟೆ ಉರಿದುಕೊಳ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...