alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀತಿಗಾಗಿ ರಾಜಕುಮಾರಿ ಪಟ್ಟವನ್ನೇ ತೊರೆದಿದ್ದಾಳೆ ಈ ಸುಂದರಿ

ಅಕಿಶಿನೋದ ರಾಜಕುಮಾರಿ ಮಾಕೋ ಪ್ರೀತಿಗಾಗಿ ಬಹುದೊಡ್ಡ ತ್ಯಾಗವನ್ನೇ ಮಾಡಿದ್ದಾಳೆ. ಜನಸಾಮಾನ್ಯನನ್ನು ಮದುವೆಯಾಗಲು ರಾಜಕುಮಾರಿ ಪಟ್ಟವನ್ನೇ ತೊರೆದಿದ್ದಾಳೆ. ಮಾಕೋ, ಜಪಾನ್ ನ ದೊರೆ ಅಕಿಹಿಟೋನ ಹಿರಿಯ ಮೊಮ್ಮಗಳು.

ಕಳೆದ 5 ವರ್ಷಗಳಿಂದ ಕೀ ಕೊಮುರೋ ಎಂಬ ಯುವಕನನ್ನು ಮಾಕೋ ಪ್ರೀತಿಸುತ್ತಿದ್ದಾಳೆ. ಆತ ರಾಜಕುಟುಂಬಕ್ಕೆ ಸೇರಿದವನಲ್ಲ. ಕೋರ್ಟ್ ನಲ್ಲಿ ಸಾಮಾನ್ಯ ಕ್ಲರ್ಕ್. ಆದ್ರೆ ಪ್ರೀತಿ ಮುಂದೆ ಯಾವ ಪ್ರತಿಷ್ಠೆಯೂ ದೊಡ್ಡದಲ್ಲ ಅನ್ನೋದನ್ನು ಮಾಕೋ ಸಾಬೀತು ಮಾಡಿದ್ದಾಳೆ.

ಕೀ ಕೊಮುರೋನನ್ನೇ ಮದುವೆಯಾಗಲು ನಿರ್ಧರಿಸಿದ್ದು, ರಾಜಕುಮಾರಿ ಪಟ್ಟ ತೊರೆಯುತ್ತೇನೆ ಅಂತಾ ತಿಳಿಸಿದ್ದಾಳೆ. ಮುಂದಿನ ವರ್ಷ ಇಬ್ಬರೂ ಸತಿ-ಪತಿಗಳಾಗಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಯುವ ಪ್ರೇಮಿಗಳು, ತಮ್ಮ ಪ್ರೇಮ್ ಕಹಾನಿ ಬಗ್ಗೆ ಹೇಳಿಕೊಂಡ್ರು.

ಕೊಮುರೋನ ಕ್ಯೂಟ್ ಸ್ಮೈಲ್, ಮಾಕೋಳನ್ನು ಆಕರ್ಷಿಸಿತ್ತಂತೆ. ಇವರಿಬ್ಬರ ಪ್ರೀತಿ ವಿಚಾರ ಈ ವರ್ಷಾರಂಭದಲ್ಲೇ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಹಿಂದೆ ಮಾಕೋಳ ಆಂಟಿ ಕೂಡ 2005ರಲ್ಲಿ ರಾಜಕುಟುಂಬದ ಸ್ಟೇಟಸ್ ತೊರೆದು ಸಾಮಾನ್ಯನನ್ನು ವಿವಾಹವಾಗಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...