alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕುಮಾರ ಹ್ಯಾರಿ ಮದುವೆಗೆ ಮುಹೂರ್ತ ಫಿಕ್ಸ್

ಬ್ರಿಟನ್ ರಾಜಕುಮಾರ ಹ್ಯಾರಿ ಮದುವೆಗೆ ಸಿದ್ಧವಾಗಿದ್ದಾರೆ. ಅಮೆರಿಕದ ನಟಿ ಮೇಘನ್ ಮಾರ್ಕ್ಲೆ ಜೊತೆ ಈ ತಿಂಗಳ ಆರಂಭದಲ್ಲೇ ಹ್ಯಾರಿ ನಿಶ್ಚಿತಾರ್ಥ ಮಾಡಿಕೊಂಡಿದ್ರು. ಮುಂದಿನ ವರ್ಷದ ಆರಂಭದಲ್ಲಿ ಮೇಘನ್ ಹಾಗೂ ಹ್ಯಾರಿ ಮದುವೆ ನಡೆಯಲಿದೆ.

2016ರಲ್ಲಿ ಹ್ಯಾರಿ ಕೆನಡಾದ ಟೊರೊಂಟೋದಲ್ಲಿ ಮೇಘನ್ ಮಾರ್ಕ್ಲೆಯನ್ನು ಭೇಟಿಯಾಗಿದ್ದರು. ಈ ಪರಿಚಯ ಪ್ರೀತಿಗೆ ತಿರುಗಿತ್ತು. 33ರ ಹರೆಯದ ಹ್ಯಾರಿ ತಮ್ಮ ಪ್ರೀತಿಯ ವಿಷಯವನ್ನು ಅಜ್ಜಿ ಕ್ವೀನ್ ಎಲಿಜಬೆತ್-2 ಗೆ ತಿಳಿಸಿ, ಅವರ ಆಶೀರ್ವಾದ ಪಡೆದಿದ್ದರು.

ಮದುವೆ ಬಳಿಕ ಹ್ಯಾರಿ ಹಾಗೂ ಮೇಘನ್, ಲಂಡನ್ ನ ಕೆನ್ನಿಂಗ್ಟನ್ ಪ್ಯಾಲೇಸ್ ನಲ್ಲಿರೋ ನಾಟಿಂಗ್ಹ್ಯಾಮ್ ಕಾಟೇಜ್ ನಲ್ಲಿ ಉಳಿದುಕೊಳ್ಳಲಿದ್ದಾರೆ. ಸದ್ಯ ಹ್ಯಾರಿ ಸಹೋದರ ರಾಜಕುಮಾರ ವಿಲಿಯಂ ಮತ್ತವರ ಪತ್ನಿ ಕೇಟ್ ಹಾಗೂ ಇಬ್ಬರು ಮಕ್ಕಳು ಕೂಡ ಅಲ್ಲೇ ನೆಲೆಸಿದ್ದಾರೆ. ಹ್ಯಾರಿ ಹಾಗೂ ಮೇಘನ್ ಮದುವೆ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...