alex Certify
ಕನ್ನಡ ದುನಿಯಾ       Mobile App
       

Kannada Duniya

ಸೋದರಳಿಯನಿಗೆ 7 ಲಕ್ಷ ರೂ. ಪುಸ್ತಕ ನೀಡಿದ ಪ್ರಿನ್ಸ್ ಹ್ಯಾರಿ

ಬ್ರಿಟನ್ ನ ರಾಜಕುಮಾರ ಪ್ರಿನ್ಸ್ ಹ್ಯಾರಿ ಅವ್ರ ಸೋದರಳಿಯ ಪ್ರಿನ್ಸ್ ಲೂಯಿಸ್ ಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. 7 ಲಕ್ಷ ರೂಪಾಯಿ ಮೌಲ್ಯದ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ. ಸೋಮವಾರ, ಪ್ರಿನ್ಸ್ ಲೂಯಿಸ್ ರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿಸುವ ಕಾರ್ಯಕ್ರಮ ನಡೆಯಿತು. ಈ ವೇಳೆ ಪ್ರಿನ್ಸ್ ಹ್ಯಾರಿ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ.

‘ವಿನಿ ದಿ ಪೂಹ್ ‘ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಪುಸ್ತಕ 1962 ರಲ್ಲಿ ಮೊದಲ ಬಾರಿ ಮುದ್ರಣಗೊಂಡಿತ್ತು. ಹ್ಯಾರಿ ನೀಡಿರುವ ಪುಸ್ತಕ ವಿನಿಯ ಎರಡನೇ ಆವೃತ್ತಿಯಾಗಿದೆ. ಪ್ರಿನ್ಸ್ ಹ್ಯಾರಿ ಹಾಗೂ ಮೇಘನ್ ಸೇರಿ ಸೋದರಳಿಯ ಹಾಗೂ ಸೋದರ ಸೊಸೆಗಾಗಿ ಗ್ರಂಥಾಲಯವೊಂದನ್ನು ನಿರ್ಮಾಣ ಮಾಡ್ತಿದ್ದಾರೆ.

ಪ್ರಿನ್ಸ್ ಹ್ಯಾರಿ ಪುಸ್ತಕ ಓದುವ ಹವ್ಯಾಸ ಹೊಂದಿದ್ದಾರೆ. ಬಾಲ್ಯದಲ್ಲಿ ಮಲಗುವ ಮೊದಲು ತಾಯಿ ಡಯಾನಾರಿಂದ ಕಥೆ ಕೇಳುತ್ತಿದ್ದರಂತೆ. ಹ್ಯಾರಿ ಹಾಗೂ ಮೇಘನ್ 21 ಲಕ್ಷ ರೂಪಾಯಿ ಮೌಲ್ಯದ ‘ಥ್ರೂ ದಿ ಕಿಲ್ಲಿಂಗ್ ಗ್ಲಾಸ್’ ಪುಸ್ತಕ ಖರೀದಿ ಮಾಡುವ ಪ್ಲಾನ್ ಹೊಂದಿದ್ದರು. ನಂತ್ರ ‘ವಿನಿ ದಿ ಪೂಹ್’ ಖರೀದಿ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...