alex Certify
ಕನ್ನಡ ದುನಿಯಾ       Mobile App
       

Kannada Duniya

ಸಮೋಸಾ ಕದ್ದು ಸಿಕ್ಕಿಬಿದ್ದ ಪ್ರಿನ್ಸ್ ಹ್ಯಾರಿ…!

ಸುಖದ ಸುಪ್ಪತ್ತಿಗೆ ಕಾಲು ಮುರುಕೊಂಡು ಮನೆ ಮುಂದೆ ಬಿದ್ದಿರಬೇಕಾದರೆ ಬ್ರಿಟನ್‌ನ ರಾಜಕುವರ ಹ್ಯಾರಿಗೆ ಕದಿಯುವ ದರ್ದೇನು ಬಂತು ಎಂದು ಕೇಳಬೇಡಿ. ಆತ ಕದ್ದಿದ್ದು ಬಾಯಿ ಚಪಲಕ್ಕೆ ಸಮೋಸಾವನ್ನಷ್ಟೇ…. ಅದು ಬೇರೆಲ್ಲೋ ಅಲ್ಲ, ತಮ್ಮ ಅರಮನೆಯಲ್ಲಿ ಪತ್ನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲೇ.

ಮೆಗಾನ್ ಮಾರ್ಕ್ಲೆ ಲಂಡನ್‌ನ ಕೆನ್ಸಿಂಗ್ಟನ್ ಪ್ಯಾಲೇಸ್‌ನಲ್ಲಿ ಒಂದು ಚಾರಿಟಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅಲ್ಲಿ ಅಡುಗೆ ಪುಸ್ತಕವೊಂದರ ಬಿಡುಗಡೆ ಮಾಡಲಾಯಿತು. ಆ ಕಾರ್ಯಕ್ರಮವೆಲ್ಲಾ ಮುಗಿದು ಇನ್ನೇನು ತೆರಳಬೇಕು ಎನ್ನುವಷ್ಟರಲ್ಲಿ ಪ್ರಿನ್ಸಿ ಹ್ಯಾರಿ ಮೆಲ್ಲನೆ ಅದೆಲ್ಲೋ ಹಿಂದಕ್ಕೆ ಹೋದರು. ಅವರು ಹೋಗಿದ್ದೆಲ್ಲಿಗೆ ಎಂಬ ಕುತೂಹಲದಿಂದ ಕ್ಯಾಮರಾ ಕಣ್ಣುಗಳೆಲ್ಲ ಅತ್ತ ದೃಷ್ಟಿ ನೆಟ್ಟವು.

ಭಾರತೀಯ ಅಚ್ಚುಮೆಚ್ಚಿನ ತಿಂಡಿಯಾಗಿರುವ ಬಿಸಿ ಬಿಸಿ, ಕ್ರಿಸ್ಪಿಯಾಗಿರುವ ಸಮೋಸಾ ಹ್ಯಾರಿಯ ಬಾಯಲ್ಲೂ ನೀರೂರಿಸಿದ್ದವು. ಅಲ್ಲಿದ್ದ ಸಮೋಸಾವೊಂದನ್ನು ಮೆಲ್ಲನೆ ಎತ್ತಿಕೊಂಡು ಕೈಯನ್ನು ಹಿಂದಕ್ಕೆ ಇಟ್ಟುಕೊಂಡು ಕಳ್ಳಬೆಕ್ಕಿನಂತೆ ಹೆಜ್ಜೆ ಹಾಕುತ್ತಾ ಪತ್ನಿ ಮೆಗಾನ್‌ರತ್ತ ಹ್ಯಾರಿ ಬಂದರು. ಆ ವೇಳೆಗೆ ಕ್ಯಾಮರಾ ಕಣ್ಣುಗಳು ತಮ್ಮನ್ನು ನೋಡುತ್ತಿರುವುದು ಅರಿವಿಗೆ ಬಂದು ಒಂದು ಕಳ್ಳ ನಗೆ ಬೀರಿದರು. ಈ ವಿಡಿಯೋ ಈಗ ಭಾರೀ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...