alex Certify
ಕನ್ನಡ ದುನಿಯಾ       Mobile App
       

Kannada Duniya

ರಾಯಲ್ ಮದುವೆಯಲ್ಲಿ ವಧು ಬದಲು ಕಣ್ಣೀರಿಟ್ಟ ವರ…!

ಭಾರತದ ಮದುವೆಗಳಲ್ಲಿ ವಧು, ಗಂಡನ ಮನೆಗೆ ಹೋಗುವಾಗ ಕಣ್ಣೀರು ಹಾಕೋದು ಸಾಮಾನ್ಯ. ಆದ್ರೆ ಇಂಗ್ಲೆಂಡ್ ನಲ್ಲಿ ಇದು ವಿರುದ್ಧವಾಗಿದೆ. ರಾಜಕುಮಾರ ಹ್ಯಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ವೇಳೆ ಹ್ಯಾರಿ ಕಣ್ಣೀರಿಟ್ಟಿದ್ದಾರೆ.

ವರನಾದ ಹ್ಯಾರಿ ಅಳುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಅನೇಕ ಜನರು ಹ್ಯಾರಿಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ನಟಿ ಮೇಘನ್ ಮರ್ಕೆಲ್ ಜೊತೆ ಮದುವೆಯಾದ ಹ್ಯಾರಿ ಕಣ್ಣಲ್ಲಿ ನೀರಿತ್ತು. ತಮ್ಮನ್ನು ತಾವು ಸಂಭಾಳಿಸಿಕೊಂಡ ಹ್ಯಾರಿ ಉಳಿದ ಕಾರ್ಯಗಳನ್ನು ಮುಗಿಸಿದ್ದಾರೆ.

ಹ್ಯಾರಿ, ತಾಯಿ ಡಯಾನಾ ನೆನೆದು ಕಣ್ಣೀರಿಟ್ಟಿದ್ದಾರೆ ಎನ್ನಲಾಗ್ತಿದೆ. ತಾಯಿಗೆ ತುಂಬಾ ಹತ್ತಿರವಾಗಿದ್ದ ಹ್ಯಾರಿ 20 ವರ್ಷಗಳವರೆಗೆ ತಮ್ಮ ಭಾವನೆ, ನೋವುಗಳನ್ನು ಮುಚ್ಚಿಟ್ಟುಕೊಂಡಿದ್ದೆ ಎಂದಿದ್ದಾರೆ. ಸೇಂಟ್ ಜಾರ್ಜ್ಸ್ ಚಾಪೆಲ್ ಚರ್ಚ್ ನಲ್ಲಿ ವಿವಾಹ ಸಮಾರಂಭ ನಡೆಯಿತು.

ಎರಡನೇ ಮದುವೆಯಾದ್ರೂ ನಟಿ ಮೇಘನ್ ವಧುವಿನ ಡ್ರೆಸ್ ನಲ್ಲಿ ಸುಂದರವಾಗಿ ಕಾಣ್ತಿದ್ದರು. ರಾಜಕುಮಾರ ಹಾಗೂ ಮೇಘನ್ ನೋಡಲು ಜನರು ರಸ್ತೆ ಬದಿಯಲ್ಲಿ ನಿಂತಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...