alex Certify
ಕನ್ನಡ ದುನಿಯಾ       Mobile App
       

Kannada Duniya

ರಾಯಲ್ ರನ್ ನಲ್ಲಿ ಅಣ್ಣನನ್ನೇ ಮಣಿಸಿದ ಪ್ರಿನ್ಸ್ ಹ್ಯಾರಿ

prince-harry

ರಾಜಕುಮಾರ ವಿಲಿಯಮ್ಸ್ ಬ್ರಿಟಿಷ್ ಸಿಂಹಾಸನಕ್ಕೆ ಸನಿಹದಲ್ಲಿದ್ದಾರೆ, ಆದ್ರೆ ಸಹೋದರ ಪ್ರಿನ್ಸ್ ಹ್ಯಾರಿ ಅವರನ್ನು ಹಿಂದಿಕ್ಕಿರೋದಂತೂ ಸುಳ್ಳಲ್ಲ. ಅಷ್ಟಕ್ಕೂ ಇದು ಗದ್ದುಗೆಗಾಗಿ ನಡೆದ ರೇಸ್ ಅಲ್ಲ. ವಿಲಿಯಮ್ಸ್, ಕೇಟ್ ಹಾಗೂ ಹ್ಯಾರಿ ಕೇಂಬ್ರಿಡ್ಜ್ ನಲ್ಲಿ ರನ್ನಿಂಗ್ ರೇಸ್ ನಡೆಸಿದ್ರು.

ಎಲ್ಲರಿಗೂ 50 ಮೀಟರ್ ಓಟದ ಸ್ಪರ್ಧೆಯಲ್ಲಿ ಯಾರು ಗುರಿ ಮುಟ್ಟಬಹುದು ಅನ್ನೋ ಕುತೂಹಲ. ‘ಹೆಡ್ಸ್ ಟುಗೆದರ್’ ಹೆಸರಿನ ಮಾನಸಿಕ ಆರೋಗ್ಯ ಕ್ಯಾಂಪೇನ್ ಹಿನ್ನೆಲೆಯಲ್ಲಿ ಲಂಡನ್ ನ ಕ್ವೀನ್ ಎಲಿಜಬೆತ್ ಒಲಿಂಪಿಕ್ ಪಾರ್ಕ್ ನಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು.

50 ಮೀಟರ್ ಓಟದ ಸ್ಪರ್ಧೆಯಲ್ಲಿ ಅಣ್ಣ ವಿಲಿಯಮ್ಸ್ ರನ್ನು ಹಿಂದಿಕ್ಕಿದ ಪ್ರಿನ್ಸ್ ಹ್ಯಾರಿ ಮೊದಲು ಗುರಿಮುಟ್ಟಿದ್ರು. ವಿಲಿಯಮ್ಸ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ರೆ, ಕೇಟ್ ಮೂರನೇ ಸ್ಥಾನ ಪಡೆದ್ರು. ಎಪ್ರಿಲ್ ನಲ್ಲಿ ನಡೆಯಲಿರುವ ಲಂಡನ್ ಮ್ಯಾರಥಾನ್ ಗೆ ತಾಲೀಮು ನಡೆಸುತ್ತಿರುವ ಸ್ಪರ್ಧಿಗಳು ಕೂಡ ಈ ರಾಜಕುಮಾರರ ಓಟಕ್ಕೆ ಸಾಕ್ಷಿಯಾದ್ರು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...