alex Certify
ಕನ್ನಡ ದುನಿಯಾ       Mobile App
       

Kannada Duniya

ಸೌದಿ ರಾಜಕುಮಾರನ ಸಾವಿನ ಸುದ್ದಿ ನಿರಾಕರಣೆ

ರಿಯಾದ್: ಸಾಮ್ರಾಜ್ಯದ ಗಣ್ಯರು ಮತ್ತು ರಾಜಕುಮಾರರ ಭ್ರಷ್ಟಾಚಾರದ ವಿರುದ್ಧದ ಕಾರ್ಯಾಚರಣೆಯಲ್ಲಿ ಸೌದಿ ಪ್ರಿನ್ಸ್ ಅಬ್ದುಲ್ಲಾಜೀಜ್ ಬಿನ್ ಫಾಹ್ದ್ ಅವರನ್ನು ಕೊಲ್ಲಲಾಗಿದೆ ಎಂಬ ಸುದ್ದಿಯನ್ನು ಅಲ್ಲಗಳೆಯಲಾಗಿದೆ.

ರಾಜಕುಮಾರ ಅಬ್ದುಲ್ಲಾಜೀಜ್ ಜೀವಂತವಾಗಿದ್ದಾರೆ ಮತ್ತು ಚೆನ್ನಾಗಿದ್ದಾರೆ ಎಂದು ಸ್ಪಷ್ಟನೆ ನೀಡಲಾಗಿದ್ದು, ಸಾವಿನ ವದಂತಿಯನ್ನು ನಿರಾಕರಿಸಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಅಬ್ದುಲ್ಲಾಜೀಜ್ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಆದರೆ, ಮಾಹಿತಿ ಇಲಾಖೆ ವಕ್ತಾರರು ಹೇಳಿಕೆ ಬಿಡುಗಡೆ ಮಾಡಿದ್ದು, ರಾಜಕುಮಾರ ಅಬ್ದುಲ್ಲಾಜೀಜ್ ಆರಾಮಾಗಿದ್ದಾರೆ ಎಂದು ತಿಳಿಸಿದ್ದಾರೆ.

ಅಧಿಕಾರಕ್ಕೆ ಅಡ್ಡಿಯಾದ ಎದುರಾಳಿಗಳು ಮತ್ತು ವಿರೋಧಿಗಳನ್ನು ಹತ್ತಿಕ್ಕುವ ಉದ್ದೇಶದಿಂದ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಭ್ರಷ್ಟಾಚಾರ ಆರೋಪದಡಿ ಕಾರ್ಯಾಚರಣೆ ನಡೆಸಿ, 11 ಮಂದಿ ರಾಜಕುಮಾರರು ಮತ್ತು 4 ಮಂದಿ ಸಚಿವರನ್ನು ಬಂಧಿಸಿದ್ದಾರೆ.

ಇತ್ತೀಚೆಗಷ್ಟೇ ಆಸಿರ್ ಪ್ರಾಂತ್ಯದ ಉಪ ಗವರ್ನರ್ ಪ್ರಿನ್ಸ್ ಮನ್ಸೂರ್ ಬಿನ್ ಮುಕ್ರಿನ್ ಹೆಲಿಕಾಪ್ಟರ್ ಪತನವಾಗಿ ಮೃತಪಟ್ಟಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...