alex Certify
ಕನ್ನಡ ದುನಿಯಾ       Mobile App
       

Kannada Duniya

ವಿದೇಶಾಂಗ ಸಚಿವರನ್ನು ವಜಾಗೊಳಿಸಿದ ಟ್ರಂಪ್

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ವಿದೇಶಾಂಗ ಸಚಿವ ಸ್ಥಾನದಿಂದ ರೆಕ್ಸ್ ಟಿಲ್ಲರ್ಸನ್ ಅವರನ್ನು ವಜಾಗೊಳಿಸಿದ್ದಾರೆ.

ಅಧ್ಯಕ್ಷರಾದ ಬಳಿಕ ಆಡಳಿತಾತ್ಮಕ ವಿಚಾರಗಳಲ್ಲಿ ಹಲವು ಬದಲಾವಣೆ ಮಾಡಿರುವ ಡೊನಾಲ್ಡ್ ಟ್ರಂಪ್, ವಿದೇಶಾಂಗ ಸಚಿವ ಸ್ಥಾನದಿಂದ ಟಿಲ್ಲರ್ಸನ್ ಅವರನ್ನು ವಜಾಗೊಳಿಸಿದ್ದು, ಅವರ ಸ್ಥಾನಕ್ಕೆ ಸಿ.ಐ.ಎ. ನಿರ್ದೇಶಕ ಮೈಕ್ ಪೊಂಪೆಯೊ ಅವರನ್ನು ನೇಮಕ ಮಾಡಿದ್ದಾರೆ.

ವಿದೇಶಾಂಗ ಸಚಿವ ಸ್ಥಾನದಿಂದ ಟಿಲ್ಲರ್ಸನ್ ಅವರನ್ನು ವಜಾಗೊಳಿಸಿರುವ ಬಗ್ಗೆ ಟ್ರಂಪ್ ಜಾಲತಾಣದಲ್ಲಿ ಮಾಹಿತಿ ನೀಡಿದ್ದು, ಮೈಕ್ ಪೊಂಪೆಯೊ ಅದ್ಭುತ ಕೆಲಸಗಾರರಾಗಿದ್ದಾರೆ. ಸೇವೆ ನೀಡಿದ ರೆಕ್ಸ್ ಟಿಲ್ಲರ್ಸನ್ ಗೆ ಧನ್ಯವಾದಗಳು. ಗಿನಾ ಹಸ್ಬೆಲ್ ಸಿ.ಐ.ಎ. ನಿರ್ದೇಶಕರಾಗಲಿದ್ದಾರೆ. ಈ ಸ್ಥಾನವನ್ನು ಅಲಂಕರಿಸಿದ ಮೊದಲ ಮಹಿಳೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...