alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಸಹಾಯಕಿಗೆ ನಾಯಿ ಎಂದ ಟ್ರಂಪ್

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಟ್ರಂಪ್ ತಮ್ಮ ಮಾಜಿ ಸಹೋದ್ಯೋಗಿ Omarosa Manigault ರಿಗೆ ನಾಯಿ ಎಂದು ಕರೆದು ವಿವಾದ ಹುಟ್ಟುಹಾಕಿದ್ದಾರೆ. ಟ್ರಂಪ್ ಮಂಗಳವಾರ ಟ್ವೀಟರ್ ನಲ್ಲಿ Omarosa Manigault ಗೆ ನಾಯಿಯೆಂದು ಟ್ವಿಟ್ ಮಾಡಿದ್ದಾರೆ.

ಟ್ರಂಪ್ ಮಾಜಿ ಸಹಾಯಕಿ ಮೇಲೆ ಮಾಡಿರುವ ಈ ಆರೋಪವನ್ನು ಜನಾಂಗೀಯ ಟೀಕೆ ಎನ್ನಲಾಗ್ತಿದೆ. ಸಹೋದ್ಯೋಗಿಗಳ ಜೊತೆ ಚರ್ಚೆ ನಡೆಸ್ತಿದ್ದ ಟ್ರಂಪ್ ಆಡಿಯೋ ಒಂದು ವೈರಲ್ ಆಗಿದೆ. ಇದ್ರ ಬಗ್ಗೆ ಪ್ರತಿಕ್ರಿಯೆ ನೀಡುವಾಗ Omarosa Manigaultಗೆ ನಾಯಿಯೆಂದಿದ್ದಾರೆ.

Omarosa Manigault ಅಂಥವರು ವೈಟ್ ಹೌಸ್ ನಲ್ಲಿದ್ರೆ ಏನೂ ಕೆಲಸವಾಗುವುದಿಲ್ಲ. ಜನರಲ್ ಕ್ಯಾಲಿ Omarosa Manigault (ನಾಯಿ)ಯನ್ನು ಬೇಗ ಹೊರಗೆ ಹಾಕಿ ಒಳ್ಳೆ ಕೆಲಸ ಮಾಡಿದ್ರು ಎಂದು ಟ್ವಿಟ್ ಮಾಡಿದ್ದಾರೆ. ಟ್ವೀಟರ್ ನಲ್ಲಿ ಟ್ರಂಪ್ Omarosa Manigault ಹೆಸರನ್ನು ಉಲ್ಲೇಖ ಮಾಡಿಲ್ಲ. ಆದ್ರೆ ಈ ಟ್ವಿಟ್ Omarosa Manigault ಉದ್ದೇಶಿಸಿ ಎಂಬುದು ಸ್ಪಷ್ಟವಾಗುತ್ತದೆ. ಯಾಕೆಂದ್ರೆ ಜನರಲ್ ಕ್ಯಾಲಿ ಹಿಂದಿನ ವರ್ಷವಷ್ಟೇ Omarosa Manigault ಅವ್ರನ್ನು ಕೆಲಸದಿಂದ ವಜಾ ಮಾಡಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...