alex Certify
ಕನ್ನಡ ದುನಿಯಾ       Mobile App
       

Kannada Duniya

ಮುಟ್ಟು ನಿಂತ ಮೇಲೂ ಗರ್ಭ ಧರಿಸಬಹುದು..!

mother

ವಯಸ್ಸಾದ ಮೇಲೆ ಮಕ್ಕಳಾಗಲ್ಲ. ಮುಟ್ಟು ನಿಂತ ಮೇಲೆ ಮುಗಿಯಿತು ಅಂತಾ ನಾವು ನೀವು ನಂಬಿದ್ವಿ. ಆದ್ರೆ ಈಗ ಆ ಚಿಂತೆ ಬೇಡ. ಮುಟ್ಟು ನಿಂತ ನಂತರವೂ ತಾಯಿಯಾಗುವ ಭಾಗ್ಯ ಸಿಗಲಿದೆಯಂತೆ.

ಯಸ್, ಆಶ್ಚರ್ಯಪಡಬೇಡಿ.ಇದನ್ನೂ ವಿಜ್ಞಾನಿಗಳು ಮಾಡಿ ತೋರಿಸಿದ್ದಾರೆ. ಸಾಮಾನ್ಯವಾಗಿ 45-50 ವರ್ಷದೊಳಗೆ ಮಹಿಳೆಯರ ಮುಟ್ಟು ನಿಲ್ಲುತ್ತದೆ. ಅದ್ರ ನಂತ್ರ ಮಕ್ಕಳಾಗುವ ಭಾಗ್ಯವನ್ನು ಮಹಿಳೆಯರು ಕಳೆದುಕೊಳ್ತಾರೆ. ಆದ್ರೆ ಮುಟ್ಟಾಗುವ ಪ್ರಕ್ರಿಯೆಯನ್ನು ಮತ್ತೆ ಮಾಡಿಸಬಹುದಂತೆ. ಹಾಗೆ ಮಾಡಿ ಮಹಿಳೆ ಗರ್ಭ ಧರಿಸುವಂತೆ ಮಾಡಬಹುದು ಎನ್ನುತ್ತಾರೆ ವಿಜ್ಞಾನಿಗಳು.

ವೈದ್ಯಕೀಯ ಚಿಕಿತ್ಸೆಯಿಂದ ಮುಟ್ಟು ನಿಂತ ಮಹಿಳೆಯರು ಮತ್ತೆ ಮುಟ್ಟಾಗುವಂತೆ ಮಾಡಲಾಗುತ್ತದೆ. ಕೆಲ ಮಹಿಳೆಯರಿಗೆ ಈ ಚಿಕಿತ್ಸೆ ನೀಡಲಾಗಿದೆ. ಅಥೆನ್ಸ್ ನಲ್ಲಿ ಇದರ ಬಗ್ಗೆ ಸಂಶೋಧನೆ ನಡೆದಿದ್ದು, ವಾರ್ಷಿಕ ಸಭೆಯಲ್ಲಿ ಇದರ ವರದಿಯನ್ನಿಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...