alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ತುಂಬು ಗರ್ಭಿಣಿಯ ಹುಚ್ಚು ಸಾಹಸ

ಓಹಿಯೋದಲ್ಲಿ ಮಹಿಳೆಯೊಬ್ಬಳ ಮೆಟರ್ನಿಟಿ ಫೋಟೋ ಶೂಟ್ ವೈರಲ್ ಆಗಿದೆ. ಫೋಟೋ ಡಿಫರೆಂಟ್ ಆಗಿರಬೇಕು ಅನ್ನೋ ಕಾರಣಕ್ಕೆ 20,000 ಜೇನುಹುಳಗಳನ್ನು ಬಳಸಿಕೊಳ್ಳಲಾಗಿದೆ. ಮಹಿಳೆಯ ಹೊಟ್ಟೆ ಮತ್ತು ಕೈಗಳಿಗೆ ಪೂರ್ತಿಯಾಗಿ ಜೀವಂತ ಜೇನುಹುಳಗಳು ಆವರಿಸಿಕೊಂಡುಬಿಟ್ಟಿವೆ.

ಆದ್ರೆ ಗರ್ಭಿಣಿ ಎಮಿಲಿ ಮ್ಯೂಲ್ಲರ್ ಮುಖದಲ್ಲಿ ಸ್ವಲ್ಪವೂ ಭಯವಿಲ್ಲ. ಯಾಕಂದ್ರೆ ಆಕೆ ಜೇನು ಸಾಕಣೆ ಮಾಡ್ತಾಳೆ. ಇಡೀ ಕುಟುಂಬ ಜೇನು ಉದ್ಯಮದಲ್ಲಿ ತೊಡಗಿಕೊಂಡಿದೆ. ಜೇನುಹುಳಗಳ ಬಗ್ಗೆ ತನಗಿರೋ ಪ್ರೀತಿಯನ್ನು ವ್ಯಕ್ತಪಡಿಸಲು ಇದಕ್ಕಿಂತ ಉತ್ತಮ ಮಾರ್ಗ ಬೇರೊಂದಿಲ್ಲ ಅಂತಾ ಎಮಿಲಿಗೆ ಅನಿಸಿತ್ತು.

ಬೆಳಗ್ಗೆ ಛಾಯಾಗ್ರಾಹಕನನ್ನು ಕರೆಸಿದ ಎಮಿಲಿ, ಜೇನುಹುಳಗಳನ್ನೆಲ್ಲ ನಿಧಾನವಾಗಿ ಪೆಟ್ಟಿಗೆಯಿಂದ ತೆಗೆದು ತನ್ನ ಹೊಟ್ಟೆಯ ಮೇಲೆ ಬಿಟ್ಟುಕೊಂಡಿದ್ದಾಳೆ. ಶಾಂತವಾಗಿದ್ದು, ಅವು ಅಲ್ಲೇ ಸೆಟಲ್ ಆಗುವಂತೆ ನೋಡಿಕೊಂಡಿದ್ದಾಳೆ. ಮೂರು ಜೇನ್ನೊಣಗಳು ಎಮಿಲಿಗೆ ಕಡಿದಿವೆ.  ಆದ್ರೂ ಹಿಂಜರಿಯದೆ ಫೋಟೋ ಶೂಟ್ ಮಾಡಿಸಿಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...