alex Certify
ಕನ್ನಡ ದುನಿಯಾ       Mobile App
       

Kannada Duniya

ಹೆರಿಗೆ ನೋವು ಸಹಿಸಲಾಗದೆ ಈಕೆ ಮಾಡಿದ್ದೇನು?

images

ಹೆರಿಗೆ ನೋವು ತಾಯಂದಿರಿಗೆ ಮಾತ್ರ ಗೊತ್ತಿರಲು ಸಾಧ್ಯ. ಆ ನೋವನ್ನು ಮಾತಿನಲ್ಲಿ, ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಹೆರಿಗೆಗೆ ಕ್ಷಣಗಣನೆ ಆರಂಭವಾಗ್ತಿದ್ದಂತೆ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಗರ್ಭಿಣಿಯರಿಗೆ ಸಲಹೆ ನೀಡ್ತಾರೆ. ಈ ಮಹಿಳೆಗೂ ರೆಸ್ಟ್ ಮಾಡುವಂತೆ ವೈದ್ಯರು ಸಲಹೆ ನೀಡಿದ್ದರು. ಆದ್ರೆ ಈ ಮಹಿಳೆ ಮಾತ್ರ ಡಾನ್ಸ್ ಮಾಡೋಕೆ ಶುರುಮಾಡಿದ್ಲು.

ಘಟನೆ ನಡೆದಿರುವುದು ಸ್ಕಾಟ್ಲ್ಯಾಂಡ್ ನ ಗ್ಲಾಸ್ಗೋದಲ್ಲಿ. ಈಕೆ ಮೂಲತಃ ಡಾನ್ಸ್ ಶಿಕ್ಷಕಿ. ಹೆರಿಗೆ ನೋವು ಶುರುವಾಗಿದೆ. ತಕ್ಷಣ ಆಸ್ಪತ್ರೆಗೆ ಹೋಗಿದ್ದಾಳೆ ಮಹಿಳೆ. ಆದ್ರೆ ಇನ್ನೂ ನೋವು ಆರಂಭದ ಹಂತದಲ್ಲಿದೆ. ಹೆರಿಗೆಗೆ ಸ್ವಲ್ಪ ಸಮಯ ಬೇಕು ಎಂದಿದ್ದಾರೆ ವೈದ್ಯರು. ಹಾಗೆ ವಿಶ್ರಾಂತಿಗೆ ಸೂಚಿಸಿದ್ದಾರೆ.

ವೈದ್ಯರು ಹೇಳಿದಂತೆ ವಿಶ್ರಾಂತಿ ಪಡೆಯುವ ಬದಲು ಡಾನ್ಸ್ ಮಾಡಲು ಶುರುಮಾಡಿದ್ದಾಳೆ 25 ವರ್ಷದ ಗರ್ಭಿಣಿ. ಈಕೆ ಡಾನ್ಸ್ ವಿಡಿಯೋ ನೋಡಿ ಕಂಗಾಲಾದ ಸ್ನೇಹಿತರು ವಿಶ್ರಾಂತಿ ಮಾಡುವಂತೆ ಸಲಹೆ ನೀಡಿದ್ದಾರೆ. ಆದ್ರೆ ಇದನ್ನು ನಿರಾಕರಿಸಿದ ಶಿಕ್ಷಕಿ, ಆದಷ್ಟು ಬೇಗ ಹೆರಿಗೆಯಾಗಲು ಹಾಗೂ ನೋವು ಸಹಿಸಿಕೊಳ್ಳಲು ಕಷ್ಟವಾಗ್ತಿರುವ ಕಾರಣ ಡಾನ್ಸ್ ಮಾಡ್ತಿದ್ದೇನೆ ಎಂದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...