alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಭಿಣಿಯ ವೀಸಾ ತಿರಸ್ಕರಿಸಿದೆ ಸ್ಕಾಟ್ಲೆಂಡ್, ಕಾರಣ ಗೊತ್ತಾ?

ಭಾರತೀಯ ಮೂಲದ ಗರ್ಭಿಣಿ ಅಲೆಕ್ಸಾಂಡ್ರಿಯಾ ರಿಂಟೊಲ್ ಎಂಬಾಕೆಗೆ ಸ್ಕಾಟ್ಲಾಂಡ್ ಗೆ ಪ್ರವೇಶ ನಿರಾಕರಿಸಲಾಗಿದೆ. ಕಾರಣ ಏನು ಗೊತ್ತಾ? ಅಲೆಕ್ಸಾಂಡ್ರಿಯಾಗೆ ಚೆನ್ನಾಗಿ ಇಂಗ್ಲಿಷ್ ಗೊತ್ತು. ಅತ್ಯಂತ ಕಠಿಣವಾದ ಇಂಗ್ಲಿಷ್ ಪರೀಕ್ಷೆಗೆ ಆಕೆ ಹಾಜರಾಗಿದ್ದಾಳೆ ಅಂತಾ ವೀಸಾ ನಿರಾಕರಿಸಲಾಗಿದೆ.

ಅಲೆಕ್ಸಾಂಡ್ರಿಯಾಳ ಪತಿ ಬಾಬ್ಬಿ ರಿಂಟೊಲ್ ಸ್ಕಾಟ್ಲಾಂಡ್ ನಲ್ಲಿ ನೆಲೆಸಿದ್ದಾರೆ. ಅಲೆಕ್ಸಾಂಡ್ರಿಯಾ ಕೂಡ ಅಲ್ಲೇ ಸೆಟಲ್ ಆಗಲು ಬಯಸಿದ್ಲು. ಆದ್ರೆ ಆಕೆ ಇಂಗ್ಲಿಷ್ ಪರೀಕ್ಷೆಗೆ ಪ್ರವೇಶ ಪಡೆದಿದ್ದು ಗೊತ್ತಾಗ್ತಿದ್ದಂತೆ ಅವಳ ವೀಸಾ ಬ್ಲಾಕ್ ಮಾಡಲಾಗಿದೆ. ಅನಿವಾರ್ಯವಾಗಿ ಬಾಬ್ಬಿ ಗರ್ಭಿಣಿ ಪತ್ನಿಯನ್ನು ಕರೆದುಕೊಂಡು ಭಾರತಕ್ಕೆ ಬಂದಿದ್ದಾರೆ.

ಕಳೆದ ಮೇನಲ್ಲಿ ಬಾಬ್ಬಿ ಹಾಗೂ ಅಲೆಕ್ಸಾಂಡ್ರಿಯಾ ವಿವಾಹವಾಗಿದ್ದಾರೆ. 2018ರ ಮೇ 2ರಂದು ಆಕೆಗೆ ಹೆರಿಗೆಯಾಗಲಿದೆ. ಆ ಸಮಯದಲ್ಲಿ ಇಬ್ಬರೂ ಜೊತೆಯಾಗಿರಬೇಕು ಅನ್ನೋದು ಅವರ ಆಸೆಯಾಗಿತ್ತು. ಆದ್ರೆ ಇಂಟರ್ ನ್ಯಾಶನಲ್ ಇಂಗ್ಲಿಷ್ ಲಾಂಗ್ವೇಜ್ ಟೆಸ್ಟಿಂಗ್ ಸಿಸ್ಟಮ್ ಪರೀಕ್ಷೆಯಲ್ಲಿ ಅಲೆಕ್ಸಾಂಡ್ರಿಯಾ ಉತ್ತೀರ್ಣಳಾಗಿದ್ದಕ್ಕೆ ವೀಸಾ ನಿರಾಕರಿಸಲಾಗಿದೆ.

ಬಾಬ್ಬಿ ಮೂಲತಃ ಶಿಲ್ಲಾಂಗನವರು. ಸದ್ಯ ಅಲೆಕ್ಸಾಂಡ್ರಿಯಾ ಬೆಂಗಳೂರಿನ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾಳೆ. ಮತ್ತೆ ವೀಸಾ ಅಪ್ಲಿಕೇಶನ್ ಹಾಕಲು ಇನ್ನೊಂದು ತಿಂಗಳು ಕಾಯಬೇಕು. ವಿನಾಕಾರಣ ಅಲೆದಾಟದಿಂದ ಹಣ ಕೂಡ ನೀರಿನಂತೆ ಖರ್ಚಾಗುತ್ತಿದೆ. ಇಂತಹ ಕ್ಷುಲ್ಲಕ ಕಾರಣಕ್ಕೆ ವೀಸಾ ತಿರಸ್ಕರಿಸಿರೋದು ನಿಜಕ್ಕೂ ವಿಪರ್ಯಾಸ ಅಂತಾ ಬಾಬ್ಬಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...