alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಭಿಣಿ ಮಹಿಳೆಯನ್ನು ಹತ್ಯೆ ಮಾಡಿದ ಮಾಜಿ ಪತಿ

ಭಾರತೀಯ ಮೂಲದ ಗರ್ಭಿಣಿ ಮೇಲೆ ಮಾಜಿ ಪತಿ ಬಾಣದಿಂದ ಹಲ್ಲೆ ನಡೆಸಿ, ಹತ್ಯೆ ಮಾಡಿರುವ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದೆ.

ಭಾರತೀಯ ಮೂಲದ 35 ವರ್ಷದ ದೇವಿ ಉನ್ಮಥಲ್ಲೆಗಡುಂ ಎನ್ನುವ‌ ಮಹಿಳೆ ಮೇಲೆ‌ ಆಕೆಯ ಮಾಜಿ ಪತಿ ರಾಮನೊಡ್ಗೆ ಉನ್ಮಥಲ್ಲೆಗಡುಂ ಬಾಣಗಳ‌ ಮೂಲಕ ಹಲ್ಲೆ ನಡೆಸಿದ್ದಾನೆ. ಹೊಟ್ಟೆಯ ಮೇಲ್ಭಾಗಕ್ಕೆ ಬಾಣ ನಾಟಿದ್ದರಿಂದ, ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಮಹಿಳೆ ಮೃತಳಾಗಿದ್ದು, ಹೊಟ್ಟೆಯಲ್ಲಿದ್ದ ಮಗುವನ್ನು ಅಪರೇಷನ್ ಮೂಲಕ‌ ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.

ಏಳು ವರ್ಷದ ಹಿಂದೆ ರಾಮನೊಡ್ಗೆ ಅವರಿಂದ ದೂರವಾದ ಬಳಿಕ,‌ ಇಮ್ತಿಯಾಝ್ ಮೊಹಮ್ಮದ್ ಅವರನ್ನು ವಿವಾಹವಾಗಿದ್ದ ದೇವಿ, ಇಸ್ಲಾಂ ಧರ್ಮಕ್ಕೆ ಬದಲಾಗಿ ಸೀಮಾ ಮೊಹಮ್ಮದ್ ಎನ್ನುವ ಹೆಸರಲ್ಲಿ ಗುರುತಿಸಿಕೊಂಡಿದ್ದರು‌.

ಸೀಮಾ ಅವರಿಗೆ ಮಾಜಿ ಪತಿಯಿಂದ ಮೂವರು ಮಕ್ಕಳು ಹಾಗೂ ಮೊಹಮ್ಮದ್ ಅವರನ್ನು ಮದುವೆಯಾದ ಬಳಿಕ ಇಬ್ಬರು ಮಕ್ಕಳಿದ್ದರು. ಪತ್ನಿಯ ಅಗಲಿಕೆ ಬಗ್ಗೆ ಮಾತನಾಡಿರುವ ಇಮ್ತಿಯಾಝ್, ಆಕೆ ಒಳ್ಳೆಯ ಪತ್ನಿ ಹಾಗೂ ತಾಯಿಯಾಗಿದ್ದಳು. ರಾಮನೊಡ್ಗೆ ಕಾರ್ ಶೆಡ್ ಹಿಂಭಾಗ ನಿಂತು ಆಕೆಯ ಮೇಲೆ ದಾಳಿ ಮಾಡುವುದು ನೋಡುತ್ತಿದ್ದಂತೆ ಮನೆ ಮುಂದಿನ ಪಾರ್ಕ್ ನಲ್ಲಿದ್ದ ತಾಯಿ ಹಾಗೂ ಮಕ್ಕಳಿಗೆ ಎಚ್ಚರಿಸಿದೆ. ಆದರೆ ಅಷ್ಟರಲ್ಲಿ ರಾಮನೊಡ್ಗೆ ಬಾಣದಿಂದ ದಾಳಿ ನಡೆಸಿದ್ದ ಎಂದಿದ್ದಾರೆ.

ಇದೀಗ ರಾಮನೊಡ್ಗೆನನ್ನು ಲಂಡನ್ ಪೊಲೀಸರು ಬಂಧಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗುರುವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...