alex Certify
ಕನ್ನಡ ದುನಿಯಾ       Mobile App
       

Kannada Duniya

40 ಅಡಿ ಆಳಕ್ಕೆ ಬಿದ್ರೂ ಈಜಿ ದಡ ಸೇರಿದೆ ಹಸು

cow

ಲಂಡನ್ ನಲ್ಲಿ ಗರ್ಭಿಣಿ ಹಸುವೊಂದು 40 ಅಡಿ ಮೇಲಿನಿಂದ ಬಿದ್ರೂ ಪವಾಡ ಸದೃಶ ರೀತಿಯಲ್ಲಿ ಬದುಕಿ ಉಳಿದಿದೆ. ಅಪರೂಪದ ವೈಟ್ ಪಾರ್ಕ್ ಜಾತಿಗೆ ಸೇರಿದ ಹಸು ಕೊರ್ನವಲ್ ನ ‘ದಿ ರಂಪ್ಸ್’ ದ್ವೀಪದ ಬಳಿ ಹುಲ್ಲು ಮೇಯುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ 40 ಅಡಿ ಆಳದ ದ್ವೀಪದಲ್ಲಿ ಬಿದ್ದಿದೆ.

ನೀರಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಹಸು ಸುಮಾರು 9 ಗಂಟೆಗಳ ಸತತ ಪ್ರಯತ್ನದ ಬಳಿಕ ಈಜಿ ದಡ ಸೇರಿದೆ. ಒಂದು ರಾತ್ರಿ ಪೂರಾ ಹಸು ನೀರಿನಲ್ಲೇ ಕಳೆದಿದೆ. ನಂತರ ಕಾರ್ನವಲ್ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ರಕ್ಷಣಾ  ಕಾರ್ಯ ಆರಂಭಿಸಿದ್ರು.

ಪ್ರವಾಹ ಪರಿಸ್ಥಿತಿ ಹಾಗೂ ಮಂದ ಬೆಳಕಿನಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡಚಣೆ ಉಂಟಾಗಿತ್ತು. ಅತ್ಯಂತ ದೂರದಲ್ಲಿ ಪ್ರತ್ಯೇಕವಾಗಿದ್ದ ದ್ವೀಪದಲ್ಲಿ ಬಿದ್ದಿದ್ರಿಂದ ಈಜಿ ದಡ ಸೇರುವುದು ಹಸುವಿಗೆ ಸುಲಭದ ಕೆಲಸವಾಗಿರಲಿಲ್ಲ. ಹಸುವನ್ನು ಸುರಕ್ಷಿತವಾಗಿ ಮೇಲಕ್ಕೆ ಕರೆತಂದ ಬಳಿಕ ಪ್ರಾಣಿ ರಕ್ಷಣಾ ದಳಕ್ಕೆ ಕೊಂಡೊಯ್ಯಲಾಗಿತ್ತು. ನಂತರ ಹಸುವನ್ನು ಮಾಲೀಕನಿಗೆ ಒಪ್ಪಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...