alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಟ್ಟೆಯಲ್ಲಿ 10 ಮಕ್ಕಳಿವೆ ಎಂದುಕೊಂಡಿದ್ರು, ಆದ್ರೆ..!

pregnant-10-babies-x-rayಮಹಿಳೆ ಹೊಟ್ಟೆಯಲ್ಲಿದ್ದ ದೊಡ್ಡ ಗಡ್ಡೆಯೊಂದನ್ನು ವೈದ್ಯರು ಹೊರ ತೆಗೆದ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಆರಂಭದಲ್ಲಿ ಮಹಿಳೆ ಹೊಟ್ಟೆಯಲ್ಲಿ 10 ಮಕ್ಕಳಿವೆ ಎನ್ನಲಾಗ್ತಾ ಇತ್ತು. ಆದ್ರೆ ಪರಿಶೀಲನೆ ನಡೆಸಿದಾಗ ಹೊಟ್ಟೆಯಲ್ಲಿ ಗಡ್ಡೆಯಿರುವುದು ಗೊತ್ತಾಗಿದೆ. ಶಸ್ತ್ರಚಿಕಿತ್ಸೆ ನಂತ್ರ 31 ಕೆ.ಜಿ. ಗಡ್ಡೆಯನ್ನು ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

ಡೇಲಿ ಮೇಲ್ ವರದಿ ಪ್ರಕಾರ 24 ವರ್ಷದ ಮಹಿಳೆಗೆ ಮೆಕ್ಸಿಕೋದ ಜನರಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಶಸ್ತ್ರಚಿಕಿತ್ಸೆ ನಂತ್ರ ಮಾತನಾಡಿದ ವೈದ್ಯರು ಮಹಿಳೆ ಪಥ್ಯದಲ್ಲಿದ್ದಳು. ಆದ್ರೂ ಆಕೆ ತೂಕ ವೇಗವಾಗಿ ಏರುತ್ತಿತ್ತು. ಕೆಲವೇ ತಿಂಗಳಲ್ಲಿ ಆಕೆ ಹೊಟ್ಟೆ ದೊಡ್ಡದಾಗಿದೆ. ಆರಂಭದಲ್ಲಿ ಮಹಿಳೆ ಹೊಟ್ಟೆಯಲ್ಲಿ 10 ಮಕ್ಕಳಿವೆ ಎಂದುಕೊಂಡಿದ್ದೆವು. ಆದ್ರೆ ಚಿಕಿತ್ಸೆ ನಂತ್ರ ಗಡ್ಡೆ ಬೆಳೆದಿರುವುದು ಗೊತ್ತಾಗಿದೆ.

ಗಡ್ಡೆ 31 ಕೆ.ಜಿ. ಗಿಂತ ದೊಡ್ಡದಾಗಿದ್ದರಿಂದ ವೈದ್ಯರಿಗೆ ಶಸ್ತ್ರಚಿಕಿತ್ಸೆ ಮಾಡಲು ಸಮಸ್ಯೆಯಾಯ್ತಂತೆ. ಗಡ್ಡೆ ಗಾತ್ರದಿಂದಾಗಿ ಮಹಿಳೆ ಹೊಟ್ಟೆಯೊಳಗಿನ ಕೆಲ ಅಂಗಕ್ಕೆ ಹಾನಿಯಾಗಿದೆಯಂತೆ. ಗಡ್ಡೆ, ಹೊಟ್ಟೆಯನ್ನು ಶೇಕಡಾ 95ರಷ್ಟು ಹರಡಿತ್ತು ಎಂದು ವೈದ್ಯರು ಹೇಳಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...