alex Certify
ಕನ್ನಡ ದುನಿಯಾ       Mobile App
       

Kannada Duniya

ಮಲಗಿದ್ದ ಗರ್ಲ್ ಫ್ರೆಂಡ್ ಮೇಲೆ ಹಾವೆಸೆದ ಭೂಪ..!

d_1479796123

ಮುತ್ತಿಟ್ಟು, ಪ್ರೀತಿಯಿಂದ ಸಂಗಾತಿ ತನ್ನನ್ನು ಹಾಸಿಗೆಯಿಂದ ಎಬ್ಬಿಸಲಿ ಅಂತಾ ಎಲ್ಲ ಹುಡುಗಿಯರೂ ಕನಸು ಕಾಣ್ತಾರೆ. ಆದ್ರೆ ಒಂದು ಹುಡುಗಿ ಜೊತೆ ನಡೆದ ಘಟನೆಯನ್ನು ಆಕೆ ಎಂದೂ ಮರೆಯಲು ಸಾಧ್ಯವಿಲ್ಲ. ನಿದ್ದೆಯಿಂದ ಎಬ್ಬಿಸಲು ಆಕೆ ಬಾಯ್ ಫ್ರೆಂಡ್ ಮಾಡಿದ ಕೆಲಸ ದಂಗಾಗಿಸುವಂತಿದೆ.

ಹುಡುಗ ಅನೇಕ ಬಾರಿ ಹುಡುಗಿಯನ್ನು ಎಬ್ಬಿಸಲು ಪ್ರಯತ್ನಿಸಿದ್ದಾನೆ. ಆದ್ರೆ ಹುಡುಗಿ ಏನೇ ಮಾಡಿದ್ರು ಹಾಸಿಗೆಯಿಂದ ಏಳಲಿಲ್ಲ. ಆಕೆಯನ್ನು ಎಬ್ಬಿಸಲು ಎರಡು ಹಾವನ್ನು ಆಕೆ ಮೈಮೇಲೆ ಎಸೆದಿದ್ದಾನೆ ಭೂಪ. ಇಷ್ಟಾದ್ರೂ ಆಕೆ ನಿದ್ದೆಗೆ ಭಂಗವುಂಟಾಗಿರಲಿಲ್ಲವಂತೆ. ಆದ್ರೆ ಹುಡುಗ ಅಲುಗಾಡಬೇಡ. ನಿನ್ನ ಮೈ ಮೇಲೆ ಎರಡು ಹಾವಿದೆ ಎಂದಿದ್ದಾನೆ. ಇದನ್ನು ಕೇಳಿ ಕಂಗಾಲಾದ ಹುಡುಗಿ ಜೋರಾಗಿ ಕಿರುಚಿಕೊಂಡಿದ್ದಾಳೆ.

ಆಕೆ ಕಿರುಚಾಡ್ತಿದ್ದರೆ ಆತ ನಗ್ತಾ ಇದ್ದ. ಇದು ತಮಾಷೆಗೆ ನಡೆದಿದ್ದು ಎಂದಿದ್ದಾನೆ ಹುಡುಗ. ಎಲ್ಲ ದೃಶ್ಯವನ್ನು ಕ್ಯಾಮರಾದಲ್ಲಿ ಶೂಟ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದಾನೆ. ಈವರೆಗೆ  ಈ ವಿಡಿಯೋವನ್ನು 675,000 ಬಾರಿ ನೋಡಲಾಗಿದೆ.

 

https://youtu.be/ZEdvZ3fkLwI

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...