alex Certify
ಕನ್ನಡ ದುನಿಯಾ       Mobile App
       

Kannada Duniya

ನವಜಾತ ಶಿಶುವನ್ನು 34 ಪೌಂಡ್‌ಗೆ ಮಾರಿದ ತಾಯಿ

ಬ್ರಿಟನ್‌ನ ತಾಯಿಯೊಬ್ಬಳು ತನ್ನ ನವಜಾತ ಶಿಶುವೊಂದನ್ನು ಮಧ್ಯ ವಯಸ್ಕ ಮಹಿಳೆಗೆ ಕೇವಲ 34 ಪೌಂಡ್‌ಗೆ ನೀಡುವ ಹೃದಯವಿದ್ರಾವಕ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನಾ ಎಂಬ ಹೆಸರಿನ ತಾಯಿ ಬಡತನದಿಂದ ಬಳಲುತ್ತಿದ್ದು, ಮಗುವನ್ನು ಸಾಕಲು ಸಾಧ್ಯವಾಗದೆ ತನ್ನ 9 ದಿನಗಳ ಹಸುಗೂಸನ್ನು ಹಸ್ತಾಂತರಿಸುವ ಮುನ್ನ ಕೊನೆಯದಾಗಿ ಅದಕ್ಕೆ ಪ್ರೀತಿಯ ಮುತ್ತು ನೀಡುವುದು ವಿಡಿಯೋದಲ್ಲಿ ಕಾಣಿಸುತ್ತದೆ.

ಒಂದು ಹಂತದಲ್ಲಿ 25 ರ ಹರೆಯದ ಆ ತಾಯಿ ಮಗುವನ್ನು ಮಾರಲು ಹಿಂಜರಿಯುತ್ತಾಳೆ. ಕಣ್ಣೀರು ಸುರಿಸುತ್ತಾಳೆ. ಕೊನೆಗೆ ಸೈಂಟ್ ಪೀಟರ್ಸ್‌ಬರ್ಗ್‌ನಿಂದ ಆಗಮಿಸಿದ್ದ ನಟಾಲಿಯಾ ಎಂಬ ಮಹಿಳೆಗೆ ಮಗುವನ್ನು ನೀಡುತ್ತಾಳೆ.

ಇನ್ನಾಳಿಂದ ಮಗುವನ್ನು ಪಡೆದ ಬಳಿಕ ನಟಾಲಿಯಾ ವಿಮಾನ ನಿಲ್ದಾಣದ ಸೆಕ್ಯೂರಿಟಿ ಚೆಕ್‌ ವೇಳೆ ಮಗುವಿನ ನಕಲಿ ಜನನ ಪ್ರಮಾಣ ಪತ್ರ ತೋರಿಸಿದ್ದಾಳೆ. ಇದೀಗ ಇಬ್ಬರೂ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ತಾನು ಮಾಡಿದ್ದು ತಪ್ಪಾಯ್ತು, ಸಾಧ್ಯವಾದರೆ ಮಗುವನ್ನು ಮರಳಿ ಪಡೆಯುತ್ತೇನೆ ಎಂದು ಇನ್ನಾ ಹೇಳಿಕೊಂಡಿದ್ದಾಳೆ. ನನ್ನ ಮಗ ಓಡಿಹೋದ ಬಳಿಕ ಮಗುವೊಂದು ಬೇಕು ಎಂಬ ಉತ್ಕಟ ಬಯಕೆಯಿಂದ ನಾನು ಈ ಮಗುವನ್ನು ಪಡೆದೆ ಎಂದು ನಟಾಲಿಯಾ ಹೇಳಿಕೊಂಡಿದ್ದಾಳೆ. ಮಕ್ಕಳ ಕಳ್ಳಸಾಗಣೆ ನಿಯಮದಡಿ ಇಬ್ಬರಿಗೂ 10 ವರ್ಷಗಳ ತನಕ ಜೈಲು ಶಿಕ್ಷೆಯಾಗುವ ಸಂಭವ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...