alex Certify
ಕನ್ನಡ ದುನಿಯಾ       Mobile App
       

Kannada Duniya

ಬಲು ವಿಚಿತ್ರವಾಗಿದೆ ಈ ಕಾರ್ ಕಳುವಿನ ಸ್ಟೋರಿ

car-vb

ಪೋರ್ಟ್ ಲ್ಯಾಂಡ್: ಕಳ್ಳರಿಗೆ ಸ್ವಲ್ಪ ಅವಕಾಶ ಸಿಕ್ಕರೆ ಸಾಕು, ಮಾಲೀಕನ ಕಣ್ಣು ತಪ್ಪಿಸಿ, ಕ್ಷಣ ಮಾತ್ರದಲ್ಲಿ ವಾಹನ, ಒಡವೆ ಎಗರಿಸಿಬಿಡುತ್ತಾರೆ.

ಆದರೆ, ಅಮೆರಿಕದ ಪೋರ್ಟ್ ಲ್ಯಾಂಡ್ ನಲ್ಲಿ ಕಾರ್ ಕಳವು ಮಾಡಿದ್ದ ಪುಣ್ಯಾತ್ಮ ವಾಪಸ್ ಅದೇ ಸ್ಥಳದಲ್ಲಿ ನಿಲ್ಲಿಸಿ, ಒಂದಿಷ್ಟು ಹಣವನ್ನು ಇಟ್ಟು ಹೋಗಿದ್ದಾನೆ. ತೊಂದರೆಯಾಗಿದ್ದಕ್ಕೆ ಕ್ಷಮಿಸಿ ಎಂದು ಚೀಟಿ ಕೂಡ ಬರೆದಿಟ್ಟಿದ್ದಾನೆ. ಅಮೆರಿಕದ ಪೋರ್ಟ್ ಲ್ಯಾಂಡ್ ನ ಎರಿನ್ ಹಾರ್ಟಿ ಎಂಬಾಕೆ ಶಾಪಿಂಗ್ ಗೆಂದು ಬಂದಿದ್ದು, ಪಾರ್ಕಿಂಗ್ ನಲ್ಲಿ ಕಾರ್ ನಿಲ್ಲಿಸಿದ್ದಾಳೆ.

ತನ್ನ ಕೆಲಸ ಮುಗಿಸಿಕೊಂಡು ಬಂದಾಗ, ಕಾರ್ ಕಳುವಾಗಿರುವುದು ಆಕೆಗೆ ಗೊತ್ತಾಗಿದೆ. ತನ್ನ ಕಾರ್ ಕಳುವಾಗಿದೆ ಎಂದು ಸಮೀಪದ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಕಳುವಾದ ಕಾರಿನ ಹುಡುಕಾಟಕ್ಕೆ ಮುಂದಾಗಿದ್ದು, ಮರುದಿನ ಎರಿನ್ ಹಾರ್ಟಿ ನಿಲ್ಲಿಸಿದ್ದ ಜಾಗದಲ್ಲೇ ಆಕೆಯ ಕಾರ್ ಪತ್ತೆಯಾಗಿದೆ.

ಕಾರ್ ಸಿಕ್ಕಿದ ಖುಷಿಯಲ್ಲಿ ಎರಿನ್ ಹೋಗಿ ನೋಡಿದಾಗ, ಕಾರಿನ ಸೀಟಿನ ಮೇಲೆ 30 ಡಾಲರ್ ಹಣ ಮತ್ತು 1 ಚೀಟಿ ಇಡಲಾಗಿತ್ತು. ಚೀಟಿಯಲ್ಲಿ, ನಿಮಗಾದ ತೊಂದರೆಗೆ ಕ್ಷಮೆ ಇರಲಿ, ನನ್ನ ಕಾರನ್ನು ತೆಗೆದುಕೊಂಡು ಬರುವಂತೆ ಸ್ನೇಹಿತೆಗೆ ಹೇಳಿದ್ದೆ. ಆದರೆ, ಆಕೆ ನಿಮ್ಮ ಕಾರನ್ನು ತಂದಿದ್ದಾಳೆ. ಇದು ಗಮನಕ್ಕೆ ಬಂದ ಕೂಡಲೇ ನಿಮ್ಮ ಕಾರನ್ನು ಅದೇ ಸ್ಥಳದಲ್ಲಿ ನಿಲ್ಲಿಸಿದ್ದೇವೆ. ಕಾರಿನಲ್ಲಿದ್ದ ಗ್ಯಾಸ್ ಬಳಸಿದ ಹಿನ್ನಲೆಯಲ್ಲಿ ಈ ಹಣ ಇಡಲಾಗಿದೆ. ಮತ್ತೊಮ್ಮೆ ನಿಮಗಾದ ತೊಂದರೆಗೆ ಕ್ಷಮೆ ಇರಲಿ ಎಂದು ಬರೆಯಲಾಗಿದೆ.

ಈ ರೀತಿ ತನ್ನ ಕಾರ್ ಕಳುವಾಗಿ ವಾಪಸ್ ಸಿಕ್ಕಿದ್ದ ಅನುಭವವನ್ನು ಎರಿನ್ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...