alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ ಪ್ರತ್ಯೇಕ ಕಮೋಡ್ ಹಿಡಿದು ಸಿಂಗಾಪುರಕ್ಕೆ ಬಂದ ಕಿಮ್

ಸಿಂಗಾಪುರ ಸದ್ಯ ಎಲ್ಲರ ಕೇಂದ್ರ ಬಿಂದು. ಸಿಂಗಾಪುರದಲ್ಲಿ ವಿಶ್ವದ ಇಬ್ಬರು ದಿಗ್ಗಜ ನಾಯಕರ ಭೇಟಿಯಾಗಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಭೇಟಿಯಾಗಿದ್ದಾರೆ. ಈ ಭೇಟಿ ಹಿನ್ನೆಲೆಯಲ್ಲಿ ಸಿಂಗಾಪುರದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಎರಡೂ ದೇಶಗಳ ಭದ್ರತಾ ಪಡೆ ಇಲ್ಲಿದೆ ಬಂದಿದೆ.

ಈ ಮಧ್ಯೆ ಕಿಮ್ ಜಾಂಗ್ ವಿಚಾರವೊಂದು ಎಲ್ಲರ ಚರ್ಚೆಗೆ ಕಾರಣವಾಗಿದೆ. ಭಾನುವಾರ ಕಿಮ್ ಸಿಂಗಾಪುರಕ್ಕೆ ಬಂದಿದ್ದಾರೆ. ಒಂದು ಗಂಟೆ ಅಂತರದಲ್ಲಿ ಮೂರು ವಿಮಾನಗಳು ಸಿಂಗಾಪುರಕ್ಕೆ ಬಂದಿಳಿದಿದ್ದವು. ಯಾವ ವಿಮಾನದಲ್ಲಿ ಕಿಮ್ ಇದ್ದಾರೆಂಬ ವಿಚಾರ ಗುಪ್ತವಾಗಿತ್ತು.

ಮೊದಲ ವಿಮಾನದಲ್ಲಿ ಆಹಾರ, ಬುಲೆಟ್ ಪ್ರೂಫ್ ವಸ್ತುಗಳು ಹಾಗೂ ಪೋರ್ಟೆಬಲ್ ಟಾಯ್ಲೆಟ್ ಸಿಂಗಾಪುರಕ್ಕೆ ಬಂದಿತ್ತು. ಕಿಮ್ ಜಾಂಗ್ ಗೆ ಶೌಚಾಲಯಕ್ಕೆ ಹೋಗಲು ಯಾವುದೇ ಸಮಸ್ಯೆಯಾಗದಿರಲಿ ಹಾಗೂ ಭದ್ರತೆಗೆ ಧಕ್ಕೆ ತರುವಂತಹ ಘಟನೆ ನಡೆಯದಿರಲಿ ಎನ್ನುವ ಕಾರಣಕ್ಕೆ ಪೋರ್ಟೆಬಲ್ ಟಾಯ್ಲೆಟ್ ತರಲಾಗಿದೆಯಂತೆ.

ಶಾಂಘೈ ಮೂಲಕ ಸಿಂಗಾಪುರಕ್ಕೆ ಬರುವ ಬದಲು ಬೀಜಿಂಗ್ ಮೂಲಕ ಕಿಮ್ ಸಿಂಗಾಪುರಕ್ಕೆ ಬಂದಿದ್ದಾರೆ. ಭದ್ರತೆ ದೃಷ್ಟಿಯಿಂದ ಈ ತೀರ್ಮಾನಕ್ಕೆ ಬರಲಾಗಿತ್ತು. ಸಮಯ ಹಾಗೂ ಖರ್ಚು ಎರಡೂ ಅಧಿಕವಾಗಿತ್ತು ಎಂದು ಮೂಲಗಳು ಹೇಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...