alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ನಂತ್ರ ಬಾಯಿ ಮುಚ್ಚಿಸಲು ಟ್ರಂಪ್ ನೀಡಿದ್ರು ಇಷ್ಟೊಂದು ಹಣ…!?

ಅಮೆರಿಕಾದ ಪೋರ್ನ್ ಸ್ಟಾರ್ ಒಬ್ಬಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ಪೋರ್ನ್ ಸ್ಟಾರ್ ಸ್ಟೀಫನಿ ಕ್ಲಿಫರ್ಡ್ ಪ್ರಕಾರ, ಟ್ರಂಪ್ ಒಂದು ರಾತ್ರಿ ಸ್ಟೀಫನಿ ಕ್ಲಿಫರ್ಡ್ ಜೊತೆ ಮಲಗಿದ್ದರಂತೆ. ಈ ವಿಷ್ಯವನ್ನು ಯಾರಿಗೂ ಹೇಳಬೇಡ ಎಂದು ಟ್ರಂಪ್ ಪರ ವಕೀಲರು ಸ್ಟೀಫನಿ ಕ್ಲಿಫರ್ಡ್ ಗೆ 130000 ಡಾಲರ್ (82 ಲಕ್ಷದ 64 ಸಾವಿರದ 750 ರೂ.) ನೀಡಿದ್ದರಂತೆ.

ಅಮೆರಿಕಾದ ದಿ ವಾಲ್ ಸ್ಟ್ರೀಟ್ ಜನರಲ್ ನಲ್ಲಿ ಶುಕ್ರವಾರ ಈ ಬಗ್ಗೆ ವರದಿಯೊಂದು ಪ್ರಕಟವಾಗಿದೆ. ವರದಿ ಪ್ರಕಾರ ಸ್ಟೀಫನಿ ಕ್ಲಿಫರ್ಡ್ 2006ರಲ್ಲಿ ಟ್ರಂಪ್ ಭೇಟಿಯಾಗಿದ್ದಳಂತೆ. ಇದಕ್ಕಿಂತ ಒಂದು ವರ್ಷ ಮೊದಲು ಟ್ರಂಪ್ ಮದುವೆ ನಡೆದಿತ್ತು. 2016ರಲ್ಲಿ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ವೇಳೆ ಸ್ಟೀಫನಿ ಕ್ಲಿಫರ್ಡ್ ಟ್ರಂಪ್ ಸಂಬಂಧವನ್ನು ಹೊರಗೆ ಹಾಕುವವಳಿದ್ದಳಂತೆ. ಆದ್ರೆ ಟ್ರಂಪ್ ಪರ ವಕೀಲರು ಹಣ ನೀಡಿ ಬಾಯಿ ಮುಚ್ಚಿಸಿದ್ದರಂತೆ.

ಸ್ಟೀಫನಿ ಕ್ಲಿಫರ್ಡ್ ಆರೋಪವನ್ನು ಟ್ರಂಪ್ ಅಟರ್ನಿ ಜನರಲ್ ಮೈಕಲ್ ಕೊಹೆನ್ ನಿರಾಕರಿಸಿದ್ದಾರೆ. ಟ್ರಂಪ್ ಸ್ಟೀಫನಿ ಕ್ಲಿಫರ್ಡ್ ಜೊತೆ ಯಾವುದೇ ಸಂಬಂಧ ಹೊಂದಿರಲಿಲ್ಲ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...