alex Certify
ಕನ್ನಡ ದುನಿಯಾ       Mobile App
       

Kannada Duniya

ಪೋರ್ನ್ ಸೈಟ್ ಬಗ್ಗೆ ಮಾಹಿತಿ ನೀಡಿದ್ರೆ ಸಿಗಲಿದೆ ಬಹುಮಾನ

ವಿಶ್ವದಾದ್ಯಂತ ಅಶ್ಲೀಲ ಸೈಟ್ ವೀಕ್ಷಿಸುವ ಯುವ ಜನತೆ ಸಂಖ್ಯೆ ಹೆಚ್ಚಾಗಿದೆ. ಯುವ ಜನತೆಯನ್ನು ಸರಿ ದಾರಿಗೆ ತರುವ ದೊಡ್ಡ ಜವಾಬ್ದಾರಿ ಸರ್ಕಾರಗಳ ಮೇಲಿದೆ. ಈಗಾಗಲೇ ಭಾರತ ಸೂಕ್ತ ಕ್ರಮಕೈಗೊಂಡಿದೆ. ಈಗ ಚೀನಾ ಕೂಡ ಭಾರತದ ದಾರಿ ತುಳಿದಿದೆ. ಭಾರತದ ನಂತ್ರ ಚೀನಾ ಪೋರ್ನ್ ಸೈಟ್ ಮೇಲೆ ನಿಷೇಧ ಹೇರಲು ಮುಂದಾಗಿದೆ.

ಪೋರ್ನ್ ಸೈಟ್ ಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ಚೀನಾ ಇನ್ನೊಂದು ಯೋಜನೆ ಶುರು ಮಾಡಿದೆ. ಚೀನಾದಲ್ಲಿ ಪ್ರಸಿದ್ಧವಾಗಿರುವ ಪೋರ್ನ್ ಸೈಟ್ ಗಳ ಬಗ್ಗೆ ಮಾಹಿತಿ ನೀಡಿದ್ರೆ ಅಂತವರಿಗೆ ಸರ್ಕಾರ ಬಹುಮಾನ ನೀಡಲಿದೆ. ಚೀನಾದಲ್ಲಿ ಪೋರ್ನ್ ಸೈಟ್ ಗಳು ಹೆಚ್ಚಾಗಿದ್ದು, ಇದ್ರಿಂದ ಯುವಜನತೆ ಹಾಳಾಗ್ತಿದ್ದಾರೆ.

ಭಾರತ ಕೂಡ ಕಳೆದ ಕೆಲ ವರ್ಷಗಳಿಂದ ಪೋರ್ನ್ ಸೈಟ್ ಗಳ ನಿಷೇಧಕ್ಕೆ ಪ್ರಯತ್ನ ನಡೆಸುತ್ತಲೇ ಇದೆ. ಇತ್ತೀಚಿಗಷ್ಟೆ ದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಕೂಡ, ತನ್ನ ನೆಟ್ವರ್ಕ್ ನಲ್ಲಿ ಅಶ್ಲೀಲ ಸೈಟ್ ನೀಡುವುದಿಲ್ಲವೆಂಬ ಘೋಷಣೆ ಮಾಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...