alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗ ಸ್ಥಳದಲ್ಲೇ ಭಿತ್ತರವಾಯ್ತು ಅಶ್ಲೀಲ ವಿಡಿಯೋ

jakarta

ಜಕಾರ್ತ: ಹಾಡಹಗಲೇ ಬಹಿರಂಗ ಸ್ಥಳದಲ್ಲಿ ಅಶ್ಲೀಲ ದೃಶ್ಯ ಪ್ರಸಾರವಾದ ಘಟನೆ ಜಕಾರ್ತದಲ್ಲಿ ನಡೆದಿದೆ. ಬಿಲ್ ಬೋರ್ಡ್ ಮೇಲೆ, ಜಾಹೀರಾತು ಬದಲಿಗೆ ಸರಸದ ದೃಶ್ಯ ಕಂಡ ಜನ ಹೌಹಾರಿದ್ದಾರೆ.

ಇಂಡೋನೇಷ್ಯಾದಲ್ಲಿ ಸಿನಿಮಾ ಮತ್ತು ಕಿರುತೆರೆಯಲ್ಲಿ ಅಶ್ಲೀಲ ದೃಶ್ಯಗಳನ್ನು ತೋರಿಸುವಂತಿಲ್ಲ. ಒಂದು ವೇಳೆ ಅಂತಹ ದೃಶ್ಯಗಳಿದ್ದರೆ ಬ್ಲರ್ ಮಾಡಬೇಕು. ಪೋರ್ನ್ ವೆಬ್ ಸೈಟ್ ಗಳನ್ನು ಕೂಡ ಬ್ಯಾನ್ ಮಾಡಲಾಗಿದೆ. ಅಷ್ಟು ಕಟ್ಟುನಿಟ್ಟಿನ ಕಾನೂನು ಜಾರಿಯಲ್ಲಿರುವ ಇಂಡೋನೇಷ್ಯಾದಲ್ಲಿ ಮಟಮಟ ಮಧ್ಯಾಹ್ನ ಬಿಲ್ ಬೋರ್ಡ್ ಮೇಲೆ ಅಶ್ಲೀಲ ದೃಶ್ಯ ಪ್ರಸಾರವಾಗಿದೆ.

ಜಾಹೀರಾತು ಫಲಕದ ಗುತ್ತಿಗೆ ಪಡೆದಿದ್ದ ವಿಡಿಯೋಟ್ರಾನ್ ಕಂಪನಿ ತಕ್ಷಣ ಪ್ರಮಾದವನ್ನು ಸರಿಪಡಿಸಿದೆ. ಆದರೆ, ಅಷ್ಟರಲ್ಲಾಗಲೇ ಕೆಲವರು ಅದನ್ನು ಚಿತ್ರೀಕರಿಸಿಕೊಂಡು ಜಾಲತಾಣದಲ್ಲಿ ಹಾಕಿದ್ದು, ಅದು ವೈರಲ್ ಆಗಿದೆ.

ಜನನಿಬಿಡ ಸ್ಥಳದಲ್ಲಿ ಮಟಮಟ ಮಧ್ಯಾಹ್ನವೇ ಅಶ್ಲೀಲ ದೃಶ್ಯ ಪ್ರಸಾರವಾಗಿದ್ದು, ಚರ್ಚೆಗೆ ಕಾರಣವಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...