alex Certify
ಕನ್ನಡ ದುನಿಯಾ       Mobile App
       

Kannada Duniya

ಜನನಿಬಿಡ ರಸ್ತೆಯಲ್ಲೇ ಪ್ರಸಾರವಾಯ್ತು ಪೋರ್ನ್ ವಿಡಿಯೋ

ಪೋರ್ನ್ ವಿಡಿಯೋ ವೆಬ್ ಸೈಟ್ ಗಳನ್ನು ನಿಷೇಧಿಸಬೇಕು ಅನ್ನೋದಕ್ಕೆ ಪರ – ವಿರೋಧ ಚರ್ಚೆ ನಡೆಯುತ್ತಲೇ ಇದೆ. ಇತ್ತ ಫಿಲಿಪೈನ್ಸ್ ನಲ್ಲಿ ಸಾರ್ವಜನಿಕ ಸ್ಥಳದಲ್ಲೇ ಪೋರ್ನ್ ವಿಡಿಯೋ ಪ್ರಸಾರ ಮಾಡಲಾಗಿದೆ.

ಮಕಾಟಿ ನಗರದಲ್ಲಿ ಅಳವಡಿಸಿದ್ದ ಎಲೆಕ್ಟ್ರಾನಿಕ್ ಬಿಲ್ ಬೋರ್ಡ್ ನಲ್ಲಿ ಪೋರ್ನ್ ವಿಡಿಯೋ ಪ್ರಸಾರವಾಗಿದೆ. ಇದನ್ನು ನೋಡಿ ಸಾರ್ವಜನಿಕರು ಶಾಕ್ ಆಗಿದ್ದಾರೆ. ಇದು ಅತ್ಯಂತ ಬ್ಯುಸಿ ರಸ್ತೆ, ನಿತ್ಯ ಇಲ್ಲಿ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ.

ಹಾಗಾಗಿ ಫೋರ್ನ್ ದೃಶ್ಯ ಪ್ರಸಾರ ಮಾಡಿರೋದು ಭಾರೀ ಸುದ್ದಿಗೆ ಗ್ರಾಸವಾಗಿದೆ. ಮಕ್ಕಳು, ವೃದ್ಧರು ಎನ್ನದೇ ಎಲ್ಲರೂ ಯುವ ಜೋಡಿಯ ಸೆಕ್ಸ್ ದೃಶ್ಯವನ್ನು ಸಾರ್ವಜನಿಕ ಸ್ಥಳದಲ್ಲಿ ವೀಕ್ಷಿಸುವಂತಾಗಿದೆ. ವಾಹನ ಸವಾರರಂತೂ 30 ಸೆಕೆಂಡ್ ಗಳ ಕಾಲ ಸ್ತಬ್ಧವಾಗಿದ್ದರು.

ಜಾಹೀರಾತಿನ ಬದಲು ಆಕಸ್ಮಿಕವಾಗಿ ಪೋರ್ನ್ ದೃಶ್ಯ ಪ್ರಸಾರವಾಗಿದೆ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ. ಕೂಡಲೇ ಬಿಲ್ ಬೋರ್ಡನ್ನೇ ಬಂದ್ ಮಾಡುವಂತೆ ಮೇಯರ್ ಆದೇಶ ನೀಡಿದ್ದಾರೆ. ಆದ್ರೆ ಸಾರ್ವಜನಿಕರು ಆ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದು, ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...