alex Certify
ಕನ್ನಡ ದುನಿಯಾ       Mobile App
       

Kannada Duniya

ಸೈನಿಕರ ಸ್ಮಾರಕದ ಮುಂದೆ ಅರೆ ಬೆತ್ತಲಾದ ಬೆಡಗಿ ಹೇಳಿದ್ದೇನು…?

ಪಾಪ್ ಗಾಯಕಿ ಇಂಡಿಯಾನಾ ಮೈ ಮೇಲಿನ ಬಟ್ಟೆ ಬಿಚ್ಚಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾಳೆ, ಅದೂ ಸೈನಿಕ ಸ್ಮಾರಕದಲ್ಲಿ. ಅದೇನು ಕಥೆ ಅಂತೀರಾ? ತನ್ನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಈಕೆ 3 ಟಾಪ್‌ಲೆಸ್ ಭಂಗಿಯ ಫೋಟೋಗಳನ್ನು ಹರಿಬಿಟ್ಟಿದ್ದಾಳೆ.

ಕೇವಲ ಶಾರ್ಟ್ಸ್, ಸಾಕ್ಸ್ ಮತ್ತು ಟ್ರೈನರ್ಸ್ ಧರಿಸಿಕೊಂಡು ಎದೆಯನ್ನು ಕೈಯಿಂದ ಮುಚ್ಚಿಕೊಂಡು ಮೊದಲ ಮಹಾ ಯುದ್ಧದ ಹುತಾತ್ಮ ಯೋಧರ ಸ್ಮಾರಕದ ಮುಂದೆ ಪೋಸ್ ನೀಡಿದ್ದಾಳೆ ಇಂಡಿಯಾನಾ.

ಇವಳ ಈ ಅವತಾರಕ್ಕೆ ಮೆಚ್ಚುಗೆಯ ಬದಲಾಗಿ ಟೀಕೆಗಳೇ ಹೆಚ್ಚು ಬಂದಿವೆ. ನಿನಗೆ ಬೇರೆ ಸ್ಥಳ ಸಿಗಲಿಲ್ಲವೇ ಬೆತ್ತಲೆ ಪೋಸ್ ನೀಡಲು ಎಂದು ಒಬ್ಬರು ಕೇಳಿದರೆ, ದೇಶಕ್ಕಾಗಿ ಬಲಿದಾನ ಮಾಡಿದ ಯೋಧರಿಗೆ ನೀನು ಎಷ್ಟು ಬೆಲೆ ಕೊಡುತ್ತೀ ಎಂಬುದನ್ನು ತೋರಿಸುತ್ತದೆ ಎಂದು ಇನ್ನೊಬ್ಬರು ಜರೆದಿದ್ದಾರೆ.

ಈ ಟೀಕೆಗಳಿಗೆ ಇನ್‌ಸ್ಟಾಗ್ರಾಂ ಪುಟದಲ್ಲೇ ಪ್ರತಿಕ್ರಿಯಿಸಿರುವ 31 ರ ಹರೆಯದ ಗಾಯಕಿ ಇಂಡಿಯಾನಾ, ನನಗೆ ಅದು ಸೈನಿಕರ ಸ್ಮಾರಕವೆಂದು ಗೊತ್ತಿರಲಿಲ್ಲ. ಆದಾಗ್ಯೂ, ದೇಶಕ್ಕಾಗಿ ಜೀವ ತೆತ್ತಿರುವ ಆ ಯೋಧರು ಸ್ತನಪಾರ್ಶ್ವ ಕಂಡು ಖುಷಿಪಡುತ್ತಾರೆ ಎಂದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...