alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಪ್ ಮ್ಯೂಸಿಕ್ ಕೇಳಿದ್ದಕ್ಕೆ ಸಾರ್ವಜನಿಕ ಸ್ಥಳದಲ್ಲಿ ಅಪ್ರಾಪ್ತ ಬಾಲಕನ ಹತ್ಯೆ

isis

ಇರಾಕಿನಲ್ಲಿ ಐಎಸ್ ಭಯೋತ್ಪಾದನಾ ಸಂಘಟನೆಯ ಕ್ರೌರ್ಯ ಎಲ್ಲೆ ಮೀರಿದೆ. ಚಿಕ್ಕ ಚಿಕ್ಕ ವಿಷಯಕ್ಕೂ ಸಂಘಟನೆ ಸಾರ್ವಜನಿಕರನ್ನು ಬಲಿ ಪಡೆಯುತ್ತಿದೆ. ಈಗ ಅಪ್ರಾಪ್ತ ಬಾಲಕನನ್ನು ಚಿಕ್ಕ ಕಾರಣಕ್ಕೆ ಸಾರ್ವಜನಿಕ ಸ್ಥಳದಲ್ಲಿ ಹತ್ಯೆ ಮಾಡಿದೆ.

ವರದಿಯೊಂದರ ಪ್ರಕಾರ ಇರಾಕಿನ ಐಎಸ್ ಪ್ರಭಾವವಿರುವ ಮೊಸುಲ್ ನಲ್ಲಿ 15 ವರ್ಷದ ಹುಡುಗನನ್ನು ಭಯೋತ್ಪಾದಕರು ಹತ್ಯೆಗೈದಿದ್ದಾರೆ. ಆಯಮ್ ಹುಸೇನ್ ಕೊಲೆಯಾದ ಹುಡುಗ. ಆತ ಪೋರ್ಟೆಲ್ ಸಿಡಿ ಪ್ಲೇಯರ್ ನಿಂದ ಪಾಪ್ ಸಾಂಗ್ ಕೇಳ್ತಾ ಇದ್ದನಂತೆ. ಆಗ ಐಎಸ್ ಆತನನ್ನು ಕರೆದೊಯ್ದಿದೆ. ಇಸ್ಲಾಮಿಕ್ ಕೋರ್ಟ್ ಮುಂದೆ ಹಾಜರುಪಡಿಸಿದೆ. ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆತನನ್ನು ಹತ್ಯೆಗಯ್ಯುವಂತೆ ಆದೇಶ ನೀಡಲಾಗಿದೆ.

ಆಯಮ್ ತನ್ನ ತಂದೆಯ ಕಿರಾಣಿ ಅಂಗಡಿಯಲ್ಲಿ ಹಾಡು ಕೇಳ್ತಾ ಇದ್ದ ಎನ್ನಲಾಗಿದೆ. ಆತನ ಹೆಣವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ನಗರದಲ್ಲಿ ಸಂಗೀತ ಕೇಳಿದ್ದಕ್ಕೆ ಹತ್ಯೆ ಆದೇಶ ನೀಡಿದ ಮೊದಲ ಘಟನೆ ಇದಾಗಿದೆ. ಇದು ಸ್ಥಳೀಯರ ಕೋಪಕ್ಕೆ ಕಾರಣವಾಗಿದೆ.

ಎರಡು ವರ್ಷಗಳ ಹಿಂದೆ ಕಾರ್, ಪಾರ್ಟಿ, ಅಂಗಡಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಂಗೀತ ಕೇಳಬಾರದೆಂದು ಭಯೋತ್ಪಾದನಾ ಸಂಘಟನೆ ನಿರ್ಬಂಧ ಹೇರಿತ್ತು. ಸಂಗೀತ ಕೇಳುವುದರಿಂದ ಅಲ್ಲಾ ಹಾಗೂ ಖುರಾನ್ ನೆನಪನ್ನು ಮರೆಸುತ್ತದೆ. ಅದು ಮನಸ್ಸನ್ನು ಉತ್ಸಾಹ ಮತ್ತು ಭ್ರಷ್ಟನನ್ನಾಗಿ ಮಾಡುತ್ತದೆ ಎಂದು ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...