alex Certify
ಕನ್ನಡ ದುನಿಯಾ       Mobile App
       

Kannada Duniya

ಮಣ್ಣಿನ ಬಿಸ್ಕಿಟ್ ತಿಂದು ಹೊಟ್ಟೆ ತುಂಬಿಸಿಕೊಳ್ತಾರೆ ಈ ಜನ

ಪ್ರಪಂಚದ ಅನೇಕ ಜನರು ಹೊಟ್ಟೆ ತುಂಬಿದ ನಂತ್ರ ಪ್ಲೇಟ್ ನಲ್ಲಿರುವ ಆಹಾರವನ್ನು ಕಸಕ್ಕೆ ಎಸೆಯುತ್ತಾರೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ ಅಂದಾಜಿನ ಪ್ರಕಾರ 1.3 ಶತಕೋಟಿ ಟನ್ ಗಳಷ್ಟು ಸೇವನೆಗೆ ಯೋಗ್ಯವಾದ ಆಹಾರ ಪದಾರ್ಥ ಕಸದ ಬುಟ್ಟಿ ಸೇರುತ್ತದೆಯಂತೆ. ಆದ್ರೆ ಇದೇ ಜಗತ್ತಿನಲ್ಲಿ ಆಹಾರವಿಲ್ಲದೆ ಪರದಾಡುವವರ ಸಂಖ್ಯೆ ಕಡಿಮೆಯೇನಿಲ್ಲ.

ಲ್ಯಾಟಿನ್ ಅಮೆರಿಕಾ ದೇಶ ಹ್ಯಾಟಿಯಲ್ಲಿ ಬಡ ಜನರು ಮಣ್ಣನ್ನು ಸೇವನೆ ಮಾಡ್ತಾರೆ. ಮಣ್ಣನ್ನು ಹಾಗೆ ಸೇವನೆ ಮಾಡೋದು ಕಷ್ಟ. ಹಾಗಾಗಿ ಮಣ್ಣಿನ ಬಿಸ್ಕಿಟ್ ತಿನ್ನುತ್ತಾರೆ. ಇಲ್ಲಿನ ಜನರ ಸರಾಸರಿ ಆದಾಯ 2 ಡಾಲರ್ ಗಿಂತ ಕಡಿಮೆಯಿದೆ. ಅಂದ್ರೆ ಸುಮಾರು 120 ರೂಪಾಯಿ. ಹಣ್ಣು, ಹಾಲು, ತರಕಾರಿ ಇಲ್ಲಿನವರ ಕನಸು. ಇದನ್ನು ದುಬಾರಿ ಆಹಾರವೆಂದು ಅವರು ಪರಿಗಣಿಸಿದ್ದಾರೆ.

ಪೌಷ್ಟಿಕಾಂಶದ ಆಹಾರ ಸೇವಿಸುವ ಬದಲು ಇಲ್ಲಿನ ಜನರು ಮಣ್ಣಿನ ಬಿಸ್ಕಿಟ್ ತಿನ್ನುತ್ತಿದ್ದಾರೆ. ಇದ್ರಿಂದ ಪೌಷ್ಟಿಕಾಂಶದ ಕೊರತೆ ಜೊತೆಗೆ ಮಣ್ಣಿನಿಂದ ಬರುವ ಅನೇಕ ಕಾಯಿಲೆಗಳು ಅವರನ್ನು ಕಾಡುತ್ತಿವೆಯಂತೆ. ಸುಮಾರು ಮೂರು ಲಕ್ಷ ಜನರ ಬಳಿ ಆಹಾರ ಖರೀದಿಗೆ ಹಣವಿಲ್ಲ. ಮಣ್ಣು, ಮಣ್ಣಿನ ಬಿಸ್ಕಿಟ್ ಇವರ ಆಹಾರ.

ದೇಶದ ಶೇಕಡಾ 10ರಷ್ಟು ಮಂದಿ ದೇಶದ ಆದಾಯದ ಶೇಕಡಾ 70ರಷ್ಟು ಪಾಲು ಪಡೆಯುತ್ತಾರೆ. ಉಳಿದ ಶೇಕಡಾ 90ರಷ್ಟು ಮಂದಿ ಆದಾಯ 120 ರೂಪಾಯಿ ಮಾತ್ರ.

ಮಣ್ಣು, ನೈಸರ್ಗಿಕ ತೈಲ ಹಾಗೂ ನೀರು ಬೆರೆಸಿ ಬಿಸ್ಕಿಟ್ ತಯಾರಿಸಿ ಬಿಸಿಲಿನಲ್ಲಿ ಒಣಗಿಸಿ ಹಸಿವಾದಾಗ ತಿನ್ನುತ್ತಾರೆ. ಇದ್ರಲ್ಲಿ ಕ್ಯಾಲ್ಸಿಯಂ ಹಾಗೂ ವಿಟಮಿನ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಎನ್ನುತ್ತಾರೆ ಇಲ್ಲಿನವರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...