alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ವಿಮಾನದಲ್ಲಿ ಯುವತಿಯ ಕಿಕಿ ಡಾನ್ಸ್…!

ಕಿಕಿ ಡ್ಯಾನ್ಸ್ ಸದ್ಯ ವಿಶ್ವದಲ್ಲೇ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಡಾನ್ಸ್ ಮಾಡಬೇಡಿ ಎಂದು ಪೊಲೀಸರು ಸೂಚನೆ ನೀಡಿದ್ರೂ, ಕಿವಿಗೊಡದ ಜನರು ಬೇರೆಯವರಿಗೆ ಸವಾಲು ಹಾಕುತ್ತಿದ್ದಾರೆ. ಈಗ ಮತ್ತೊಂದು ಕಿಕಿ ಡಾನ್ಸ್ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಯುವತಿಯೊಬ್ಬಳು ಪಾಕಿಸ್ತಾನ ಏರ್ ಲೈನ್ಸ್ ವಿಮಾನದಲ್ಲಿ ಕಿಕಿ ಡ್ಯಾನ್ಸ್ ಮಾಡುವುದು ಸೆರೆಯಾಗಿದೆ. ವಿದೇಶಿ ಮಹಿಳೆಯೊಬ್ಬಳು ಪಾಕ್ ಧ್ವಜ ಹಿಡಿದು ಹಾಡಿಗೆ ಹೆಜ್ಜೆ ಹಾಕಿದ್ದು, ಸಾಮಾಜಿಕ ತಾಣದಲ್ಲಿ ಸದ್ದು ಮಾಡ್ತಾ ಇದೆ. ಯುವತಿ ವಿಮಾನದ ಒಳಗೆ ಹಾಗೂ ರನ್ ವೇ ನಲ್ಲಿ ನೃತ್ಯ ಮಾಡಿ ಗಮನ ಸೆಳೆದಿದ್ದಾಳೆ. ಪೋಲ್ಯಾಂಡ್ ಮೂಲದ ಇವಾ ಜುವೆಕ್ ಪಾಕ್, ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಪಾಕಿಸ್ತಾನ ಧ್ವಜ ಹಿಡಿದು ಡಾನ್ಸ್ ಮಾಡಿದ್ದಾರೆ.

ಪಾಕಿಸ್ತಾನದ ತನಿಖಾಧಿಕಾರಿಗಳು ಈಗ ಈ ಕುರಿತು ತನಿಖೆ ನಡೆಸಲು ಸೂಚಿಸಿದ್ದಾರೆ. ಅಲ್ಲದೆ ಯುವತಿ ಕಿಕಿ ಡಾನ್ಸ್ ಮಾಡುವುದಷ್ಟೇ ಅಲ್ಲ, ಭದ್ರತಾ ನಿಯಮಗಳನ್ನು ಸಹ ಗಾಳಿಗೆ ತೂರಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ರನ್ ವೇ ನಲ್ಲಿ ಯುವತಿಗೆ ಡಾನ್ಸ್ ಮಾಡಲು, ಅನುಮತಿ ನೀಡಿದ್ದರ ಬಗ್ಗೆ ಪ್ರಶ್ನೆಗಳು ಎದ್ದಿವೆ. ಭದ್ರತಾ ಲೋಪದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪಾಕಿಸ್ತಾನ ಏರ್ ಲೈನ್ಸ್ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...