alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಪೊಲೀಸನ ಸಾಹಸ ನೋಡಿ ಬೆರಗಾಗಿದ್ದಾರೆ ಜನ…!

ಇಂಗ್ಲೆಂಡ್ ನ ವೆಸ್ಟ್ ಯಾರ್ಕ್ ಶೈರ್ ನಲ್ಲಿ ಸೇತುವೆಯಿಂದ ಕೆಳಗೆ ಬೀಳುತ್ತಿದ್ದ ಲಾರಿಯೊಂದನ್ನು ಸಾಹಸಿ ಪೊಲೀಸ್ ಅಧಿಕಾರಿ ಬರಿಗೈನಲ್ಲೇ ತಡೆದು ನಿಲ್ಲಿಸುವ ಮೂಲಕ ಚಾಲಕನ ಪ್ರಾಣ ಉಳಿಸಿದ್ದಾರೆ.

ಬೆಳಗ್ಗೆ 6 ಗಂಟೆ ಸಮಯದಲ್ಲಿ ಲಾರಿ ಅಪಘಾತಕ್ಕೀಡಾಗಿತ್ತು. ಸೇತುವೆಯ ಅಂಚಿನಲ್ಲೇ ಪಲ್ಟಿಯಾಗಿದ್ದ ಲಾರಿ ಸ್ವಲ್ಪ ಗಾಳಿಗೆ ಅಲ್ಲಾಡಿದ್ರೂ ಕೆಳಗೆ ಬೀಳುತ್ತಿತ್ತು. ಚಾಲಕ ಕೂಡ ಲಾರಿಯೊಳಗೆ ಸಿಕ್ಕಿಹಾಕಿಕೊಂಡಿದ್ದ. ಟ್ರಕ್ ಕೆಳಗೆ ಬಿದ್ದಿದ್ದೇ ಆದ್ರೆ ಆತ ಬಚಾವಾಗುವ ಚಾನ್ಸೇ ಇರಲಿಲ್ಲ. ಅಪಾಯ ಅರಿತ ಪೊಲೀಸ್ ಅಧಿಕಾರಿ, ಲಾರಿಯನ್ನು ಬರಿಗೈನಲ್ಲೇ ತಡೆದು ನಿಲ್ಲಿಸಿದ್ದಾರೆ.

ಕೂಡಲೇ ಸಿಬ್ಬಂದಿಗೆ ಕರೆ ಮಾಡಿ ತಿಳಿಸಿದ್ದಾರೆ. ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಬರುವವರೆಗೂ ಏಕಾಂಗಿಯಾಗಿ ಅವರು ಲಾರಿಯನ್ನು ತಡೆದು ನಿಲ್ಲಿಸಿದ್ರು. ನಂತರ ಸಿಬ್ಬಂದಿ ಲಾರಿಯನ್ನು ಬದಿಗೆ ಎಳೆದು, ಒಳಗಿದ್ದ ಚಾಲಕನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸ್ ಅಧಿಕಾರಿಯ ಸಮಯ ಪ್ರಜ್ಞೆ ಮತ್ತು ಸಾಹಸವನ್ನು ಎಲ್ಲರೂ ಕೊಂಡಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...