alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಪುಟ್ಟ ಮಗುವಿನ ರಕ್ಷಣೆಯ ವಿಡಿಯೋ

ದಕ್ಷಿಣ ಚೈನಾದ ಪೆಂಗ್ಗಾಂಗ್ ನಗರದಲ್ಲಿ ವಿದ್ಯುತ್ ತಂತಿ ಮೇಲೆ ಬಿದ್ದು ನೇತಾಡುತ್ತಿದ್ದ 10 ತಿಂಗಳ ಹಸುಗೂಸನ್ನು ಪಾದಚಾರಿಗಳು ಪೊಲೀಸರ ಸಹಕಾರದೊಂದಿಗೆ ರಕ್ಷಿಸಿದ ವಿಡಿಯೋ ವೈರಲ್ ಆಗಿದೆ.

ಅಂಬೆಗಾಲಿಡುವ ಕೂಸು ಮೊದಲ ಮಹಡಿಯ ಮನೆಯ ಬಾಲ್ಕನಿಯಿಂದ ವಿದ್ಯುತ್ ತಂತಿ ಮೇಲೆ ಬಿದ್ದು ಸಿಕ್ಕಿಕೊಂಡಿತ್ತು. ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಯುವತಿ ಇದನ್ನು ಗಮನಿಸಿದ್ದಾಳೆ. ಅಲ್ಲಿಗೆ ಬಂದ ಡೆಲಿವರಿ ಬಾಯ್ ಒಬ್ಬ ಪೊಲೀಸರಿಗೆ ಸುದ್ದಿಯನ್ನೂ ಮುಟ್ಟಿಸಿದ್ದಾನೆ.

ಅಷ್ಟರಲ್ಲೇ ತೂಗಾಡುತ್ತಿದ್ದ ಮಗು ಯಾವುದೇ ಕ್ಷಣದಲ್ಲಿ ನೆಲಕ್ಕುರುಳಬಹುದೆಂದು ಅರಿತ ಅಲ್ಲಿದ್ದವರು, ಪಕ್ಕದಲ್ಲೇ ಬಿದ್ದಿದ್ದ ತಾಡಪಾಲನ್ನು ಬಳಸಿ ಮಗು ನೇರವಾಗಿ ನೆಲಕ್ಕೆ ಬೀಳುವುದನ್ನು ತಡೆದಿದ್ದಾರೆ. ಟಾರ್ಪಲ್ ಹಿಡಿದ ಕೆಲವೇ ಕ್ಷಣದಲ್ಲಿ ಮಗು ತಂತಿಯಿಂದ ಜಾರಿದೆ. ಮಗು ಟಾರ್ಪಲಿನ ಮೇಲೆ ಬಿದ್ದು ನಿಧಾನವಾಗಿ ನೆಲಕ್ಕುರುಳಿದ ಸಂಗತಿಯೂ ವಿಡಿಯೋದಲ್ಲಿ ಕಂಡುಬಂದಿದೆ.

ಆ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಪೋಷಕರಿಗೆ ಮಗುವಿನ ಬಗ್ಗೆ ಜಾಗೃತಿ ಕೊರತೆ ಘಟನೆಗೆ ಕಾರಣ ಎಂದು ಅಲ್ಲಿನ ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...