alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ಲ್ಯಾಶರ್ ಸೆರೆಗೆ ಈ ಫೋಟೋ ರಿಲೀಸ್ ಮಾಡಿದ್ದಾರೆ ಪೊಲೀಸರು

ಇಂಗ್ಲೆಂಡ್ ನ ಸರ್ರೆಯಲ್ಲಿ ಮಹಿಳೆಯರಿಗೆ ಫ್ಲ್ಯಾಶರ್ ಒಬ್ಬನ ಕಾಟ ಶುರುವಾಗಿದೆ. ಮಹಿಳೆಯರನ್ನು ಅಡ್ಡಗಟ್ಟಿ ಅವರ ಅಂಗವನ್ನು ಎಕ್ಸ್ ಪೋಸ್ ಮಾಡೋದೇ ಇವನ ಕಾಯಕ. ಅವನನ್ನು ಹಿಡಿಯಲು ಪೊಲೀಸರು ಇ-ಫಿಟ್ ಫೋಟೋ ಬಿಡುಗಡೆ ಮಾಡಿದ್ದಾರೆ.

20 ವರ್ಷದ ಆ ಯುವಕ 6.3 ಅಡಿ ಎತ್ತರವಿದ್ದಾನೆ. ಆಗಸ್ಟ್ 31ರಂದು ಮಧ್ಯಾಹ್ನ 40 ವರ್ಷದ ಮಹಿಳೆಯೊಬ್ಬಳನ್ನು ಅಡ್ಡಗಟ್ಟಿದ್ದ. ಅವಳ ಜೊತೆಗೆ ಮಾತನಾಡಲು ಯತ್ನಿಸಿದ್ದ. ಆತ ಫ್ಲ್ಯಾಶರ್ ಇರಬಹುದು ಅನ್ನೋ ಅನುಮಾನದಿಂದ ಮಹಿಳೆ ಕೂಡಲೇ ಕಾರು ಏರಿ ಹೊರಟು ಹೋಗಿದ್ದಾಳೆ.

ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾಳೆ. ಮಹಿಳೆ ನೀಡಿದ ಮಾಹಿತಿ ಆಧರಿಸಿ ಖದೀಮನ ಇ-ಫಿಟ್ ಫೋಟೋ ತಯಾರಿಸಲಾಗಿದೆ. ಸಾಮಾನ್ಯವಾಗಿ ಇ-ಫಿಟ್ ಫೋಟೋಗಳನ್ನು ಮುಖಚಹರೆಯನ್ನು ಮಾತ್ರ ಚಿತ್ರಿಸಲಾಗುತ್ತದೆ. ಆದ್ರೆ ಈತನ ಎದೆಯ ಭಾಗವನ್ನು ಕೂಡ ಚಿತ್ರಿಸಿ, ಫೋಟೋ ರಿಲೀಸ್ ಮಾಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...