alex Certify
ಕನ್ನಡ ದುನಿಯಾ       Mobile App
       

Kannada Duniya

ಮನುಷ್ಯರ ಮುಖವುಳ್ಳ ಬೆಕ್ಕಿನಂಥ ವಿಚಿತ್ರ ಪ್ರಾಣಿ ಪತ್ತೆ..!

ಮನುಷ್ಯರ ಮುಖವುಳ್ಳ ಬೆಕ್ಕಿನಂಥ ಚಿಕ್ಕ ಪ್ರಾಣಿಯ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಇದು ಮಲೇಶಿಯಾದಲ್ಲಿ ಕಂಡುಬಂದಿದೆ ಎಂಬ ಸುದ್ದಿ ಹರಡಿದೆ.

ತಿಳಿ ಗುಲಾಬಿ ಮೈ ಬಣ್ಣ ಹೊಂದಿರುವ ಈ ಪ್ರಾಣಿ ಮನುಷ್ಯರನ್ನ ಹೋಲುವ ಮುಖ ಹೊಂದಿದ್ದು, ಬಾಯಿಯಲ್ಲಿ ಎರಡು ಕೋರೆಹಲ್ಲುಗಳಿವೆ. ಮೈಮೇಲೆಲ್ಲ ಕಪ್ಪು ಬಣ್ಣದ ಉದ್ದುದ್ದ ಕೂದಲನ್ನೂ ಹೊಂದಿದ್ದು, ಅದರ ನಾಲ್ಕು ಕಾಲುಗಳು ಬೆಕ್ಕನ್ನ ಹೋಲುವಂತಿವೆ.

ಈ ವಿಚಿತ್ರ ಪ್ರಾಣಿಯ ಫೋಟೋ, ವಿಡಿಯೋ ಪ್ರಚಾರ ಪಡೆಯುತ್ತಿದ್ದಂತೆ, ಮಲೇಶಿಯಾ ಪೊಲೀಸರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಇದು ನೈಜ ಫೋಟೋಗಳಲ್ಲ. ಯಾರೋ ಬೇಕೆಂದೇ ಇಂಥ ಪ್ರಾಣಿಯನ್ನ ಸಿಲಿಕಾನ್‌ ನಿಂದ ತಯಾರು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಪ್ರಚಾರ ನೀಡಿದ್ದಾರೆ ಎಂದಿದ್ದಾರೆ.

ಪಶ್ಚಿಮ ಮಲೇಶಿಯಾದ ಪಹಾಂಗ್‌ ಎಂಬ ಪ್ರದೇಶದಲ್ಲಿ ಈ ಕೃತಕ ಪ್ರಾಣಿಯನ್ನ ಸೃಷ್ಟಿ ಮಾಡಿ ಶೂಟ್ ಮಾಡಲಾಗಿದೆ. ಯಾರು ಈ ರೀತಿ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ, ಇಂಥ ಪ್ರಾಣಿ ಅಸ್ತಿತ್ವದಲ್ಲಿಲ್ಲ. ಈ ಬಗ್ಗೆ ಭಯ, ಆತಂಕ ಬೇಡ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಇಂಥ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...