alex Certify
ಕನ್ನಡ ದುನಿಯಾ       Mobile App
       

Kannada Duniya

ಬಯಲಾಯ್ತು ಅನಾಥವಾಗಿ ಬಿದ್ದಿದ್ದ ರಕ್ತಸಿಕ್ತ ಕೈ ರಹಸ್ಯ

ಇಂಗ್ಲೆಂಡ್ ನಲ್ಲಿ ಕತ್ತರಿಸಿ ಬಿಸಾಡಿದ್ದ ಮನುಷ್ಯನ ಕೈ ರಸ್ತೆಯಲ್ಲಿ ಪತ್ತೆಯಾಗಿತ್ತು. ರಕ್ತಸಿಕ್ತವಾಗಿದ್ದ ಮಣಿಕಟ್ಟು ಮಿಡಲ್ಸ್ಬರೋಡಿನಲ್ಲಿ ಬಿದ್ದುಕೊಂಡಿತ್ತು. ಅದನ್ನು ನೋಡಿ ಗಾಬರಿಗೊಂಡ ವಾಹನ ಸವಾರರು ಪೊಲೀಸರಿಗೆ ಮಾಹಿತಿ ನೀಡಿದ್ರು.

ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆದ್ರೆ ಅದು ಅಸಲಿ ಕೈ ಆಗಿರಲಿಲ್ಲ. ಥೇಟ್ ಕೈನಂತೆಯೇ ಕಾಣುತ್ತಿದ್ದ ರಬ್ಬರ್ ನಿಂದ ಮಾಡಿದ ನಕಲಿ ಕೈ ಆಗಿತ್ತು. ಹಾಗಾಗಿ ಈ ಪ್ರಕರಣವನ್ನೇ ಪೊಲೀಸರು ಕ್ಲೋಸ್ ಮಾಡಿದ್ದಾರೆ.

ಯಾರೋ ಕತ್ತರಿಸಿ ಬಿಸಾಡಿದ್ದಾರೆ ಎಂಬ ಭಾವನೆ ಮೂಡುವಂತೆ ರಬ್ಬರ್ ಕೈಗೆ ರಕ್ತ ಬಳಿಯಲಾಗಿತ್ತು. ಆದ್ರೆ ಯಾರು ಈ ಕೃತ್ಯ ನಡೆಸಿದ್ದಾರೆ ಅನ್ನೋದು ಪತ್ತೆಯಾಗಿಲ್ಲ. ಪೊಲೀಸರನ್ನು ಬೇಸ್ತು ಬೀಳಿಸಲು ಕಿಡಿಗೇಡಿಗಳು ಮಾಡಿರುವ ಕೆಲಸ ಅಂತಾನೇ ಹೇಳಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...