alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಯಸಿ ಕೊಲೆ ಮಾಡಿ ಮಿದುಳು ತಿಂದ ಪ್ರಿಯಕರ..!

ರಷ್ಯಾದ ವಾಲ್ಡೆ ಸಿಟಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮನುಷ್ಯರ ಮಾಂಸ ತಿನ್ನುತ್ತಿದ್ದ ಕವಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ತನ್ನ ಪ್ರೇಯಸಿಯನ್ನು ಕೊಂದು ಆಕೆ ಮಿದುಳನ್ನು ತಿಂದಿದ್ದಾನೆ. ಆರೋಪಿ ತಪ್ಪೊಪ್ಪಿಕೊಂಡಿದ್ದು ಆತನನ್ನು ಜೈಲಿಗಟ್ಟಲಾಗಿದೆ.

20 ವರ್ಷದ ಆರೋಪಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಆರೋಪಿ ಮಾರ್ಚ್ ನಲ್ಲಿ ತನ್ನ 45 ವರ್ಷದ ಪ್ರೇಯಸಿಯನ್ನು ಹತ್ಯೆ ಮಾಡಿದ್ದ. ನಂತ್ರ ಆಕೆ ಮಿದುಗಳನ್ನು ಹೊರಗೆ ತೆಗೆದಿದ್ದ.

ಮಾರ್ಚ್ 8 ಅಂತರಾಷ್ಟ್ರೀಯ ಮಹಿಳಾ ದಿನದಂದು ಯುವ ಕವಿ ಹಾಗೂ ಆತನ ಪ್ರೇಯಸಿ ಡೇಟಿಂಗ್ ಫಿಕ್ಸ್ ಮಾಡಿದ್ದರಂತೆ. ಮಹಿಳೆ ಕವಿಯ ಮನೆಗೆ ಬಂದಿದ್ದಳಂತೆ. ಈ ವೇಳೆ ಸಣ್ಣ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಸಿಟ್ಟಿಗೆದ್ದ ಕವಿ ಬಾಟಲಿಯಿಂದ ಹಲ್ಲೆ ನಡೆಸಿ ಆಕೆಯನ್ನು ಹತ್ಯೆ ಮಾಡಿದ್ದಾನೆ. ನಂತ್ರ ಆಕೆ ತಲೆ ಕತ್ತರಿಸಿ ಮೆದುಳನ್ನು ಎತ್ತಿಟ್ಟುಕೊಂಡಿದ್ದ ಎನ್ನಲಾಗಿದೆ. ಪ್ರತಿದಿನ ಆಹಾರದ ಜೊತೆ ಮೆದುಳಿನ ಸಣ್ಣ ತುಣುಕನ್ನು ತಿನ್ನುತ್ತಿದ್ದನಂತೆ.

ಮಹಿಳೆಯರ ನಾಪತ್ತೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಪೊಲೀಸರು ಕವಿ ಮನೆ ತಲುಪಿದ್ದಾರೆ. ಆಗ ಸತ್ಯ ಹೊರ ಬಿದ್ದಿದೆ. ಕವಿ ತಪ್ಪೊಪ್ಪಿಕೊಂಡಿದ್ದಾನೆ. ಈತನ ಕವಿತೆಗೆ ಮೆಚ್ಚಿ 2016ರಲ್ಲಿ ರಷ್ಯಾದ ರೈಟರ್ ಯೂನಿಯನ್ ಸನ್ಮಾನ ಮಾಡಿತ್ತು ಎನ್ನಲಾಗಿದೆ.

ರಷ್ಯಾದಲ್ಲಿ ಮಾನವ ಮಾಂಸ ಸೇವನೆ ಪ್ರಕರಣ ಇದೇ ಹೊಸದಲ್ಲ. ಈ ಹಿಂದೆ ಕೂಡ ಇಂಥ ಪ್ರಕರಣವೊಂದು ಬೆಳಕಿಗೆ ಬಂದಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...